ಸಾಗರ ಆಟೋ ಚಾಲಕರಿಗೆ ಎಚ್ಚರಿಕೆ | ಆನಂದಪುರ ಸ್ಟೇಷನ್‌ನಲ್ಲಿ ಬಾಲಕನ ರಕ್ಷಣೆ | ಕಾರಲ್ಲಿ ಶವ | 39 ಸಾವಿರ ದಂಡ
shivamogga fast news

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 13, 2025
ಶಿವಮೊಗ್ಗದಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವರದಿ ನೀಡುವ ಮಲೆನಾಡು ಟುಡೆಯ ಇವತ್ತಿನ ಟಾಪ್ 5 ಚಟ್ ಪಟ್ ನ್ಯೂಸ್‌ನ ರಿಪೋರ್ಟ್ ಇಲ್ಲಿದೆ
ಸುದ್ದಿ 1 | ಕಾರಿನಲ್ಲಿ ಶವ ಪತ್ತೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಸಾಗರ ಪೇಟೆಯ ಬಸವನ ಹೊಳೆ ಸಮೀಪ ನಿಲ್ಲಿಸಿದ್ದ ಟಾಟಾ ಇಂಡಿಕಾ ಕಾರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತರ ಗುರುತು ಸಹ ಪತ್ತೆಯಾಗಿದ್ದು, ಅವರನ್ನು ಬಿಳಕಿಯ ಮಾರುತಿ ಎಂದು ಗುರುತಿಸಲಾಗಿದೆ. ಡ್ರೈವರ್ ಆಗಿದ್ದ ಅವರು ಕಾರಿನಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ. ಮೃತರ ಸಹೋದರ, ಈ ಸಂಬಂದ ಪೊಲೀಸರಿಗೆ ದೂರು ನೀಡಿದ್ದು, ಮಾರುತಿಯವರ ಸಾವು ಅನುಮಾಸ್ಪದವಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿ 2 | 25 ಸಾವಿರ ಫೈನ್
ಮತ್ತೊಮ್ಮೆ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸರು ದುಬಾರಿ ದಂಡ ವಿಧಿಸಿದ್ದು ಅಪ್ರಾಪ್ತನಿಗೆ ವಾಹನ ಚಾಲನೆಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಆತನ ಪೋಷಕರಿಗೆ ಕೋರ್ಟ್ ಮೂಲಕ 25 ಸಾವಿರ ರೂಪಾಯಿ ದಂಡ ಹಾಕಿಸಿದ್ದಾರೆ. 18/01/2025 ರಂದು ಪಂಪ್ ಹೌಸ್ ಹತ್ತಿರ ಪಿಎಸ್‌ಐ ಭಾರತೀ ಬಿಹೆಚ್ ಹಾಗೂ ಸಿಬ್ಬಂದಿ ಸುರೇಶ್, ಸೂರ್ಯಾನಾಯ್ಕ್ ವಾಹನ ತಪಾಸಣೆ ನಡೆಸ್ತಿದ್ದರು. ಈ ವೇಳೆ ಸ್ಪ್ಲೆಂಡರ್ ಬೈಕ್‌ನಲ್ಲಿ ತ್ರಿಬ್ಬಲ್ ರೈಡ್ ಬಂದವರನ್ನು ತಡೆದು ದಾಖಲಾತಿ ಪರಿಶೀಲನೆ ನಡೆಸಿದ್ದರು. ಆಗ ಬೈಕ್ ಚಾಲನೆ ಮಾಡುತ್ತಿದ್ದವನು ಅಪ್ರಾಪ್ತ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಡಿಎಲ್ ಇಲ್ಲದೆ ಚಾಲನೆ, ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ತ್ರಿಬ್ಬಲ್ ರೈಡ್ ಚಾಲನೆ ಮಾಡಿದ ಆರೋಪ ಹಾಗೂ ಅಪ್ರಾಪ್ತನಿಗೆ ಬೈಕ್ ಕೊಟ್ಟು ಕಾನೂನು ಉಲ್ಲಂಘಿಸಿದ ಬೈಕ್ ಮಾಲೀಕರ ವಿರುದ್ಧ ಚಾರ್ಜ್‌ಶೀಟ್ ಮಾಡಿದ್ದರು. ಬಳಿಕ ಅದನ್ನು 04ನೇ ಎಸಿಜೆ & ಜೆಎಂಎಫ್.ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ನ್ಯಾಯಾಲಯವು ಮೋಟಾರ್ ಬೈಕ್ ಮಾಲೀಕನಿಗೆ ರೂ.25,000 ದಂಢ ವಿಧಿಸಿದೆ.
ಸುದ್ದಿ 3 | 12 ಸಾವಿರ ರೂಪಾಯಿ ದಂಡ
ಕೆಲದಿನಗಳ ಹಿಂದಷ್ಟೆ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸರು ಸಿಸಿ ಕ್ಯಾಮರಾಗಳ ಮೂಲಕ ದಾಖಲಾದ 15 ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನೊಬ್ಬನಿಗೆ ಬರೋಬ್ಬರಿ 16500 ರೂಪಾಯಿ ದಂಡ ವಿಧಿಸಿದ್ದರು. ಇದೀಗ ಅಂತುಹುದ್ದೆ ಒಂದು ಪ್ರಕರಣದಲ್ಲಿ ವಾಹನ ಸವಾರೊಬ್ಬನಿಗೆ 14 ಸಾವಿ ರೂಪಾಯಿ ದಂಡ ಹಾಕಿದ್ದಾರೆ. ಇದರ ಫೋಟೋವನ್ನು ಶಿವಮೊಗ್ಗ ಎಸ್‌ಪಿಯುವರು ತಮ್ಮ ಎಕ್ಸ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಮಾರುದದ್ದ ರಸೀದಿ ಎದ್ದು ಕಾಣುತ್ತಿದೆ.
ಸುದ್ದಿ 4 | ಆನಂದಪುರ ರೈಲ್ವೆ ನಿಲ್ದಾಣದಲ್ಲಿ ಅಪ್ರಾಪ್ತನ ರಕ್ಷಣೆ
ಶಿವಮೊಗ್ಗ ರೈಲ್ವೆ ನಿಲ್ದಾಣಗಳಲ್ಲಿ ಆಪರೇಷನ್ ನನ್ನೆ ಪರಿಷ್ತೆ ಹೆಸರಿನ ಅಭಿಯಾನ ಚಾಲನೆಯಲ್ಲಿದೆ. ವಿವಿಧ ಕಾರಣಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಅನುಮಾನಸ್ಪದವಾಗಿ ಕಾಣುವ ಅಪ್ರಾಪ್ತರನ್ನು ವಿಚಾರಿಸಿ ಅವರಿ ಸಹಾಯ ಒದಗಿಸುವ ಕೆಲಸವನ್ನು ರೈಲ್ವೆ ರಕ್ಷಣಾ ದಳ ಅಭಿಯಾನದ ಅಡಿಯಲ್ಲಿ ಮಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಆನಂದಪುರ ರೈಲ್ವೆ ಸ್ಟೇಷನ್‌ನಲ್ಲಿ 11 ವರ್ಷದ ಬಾಲಕನನ್ನು ರಕ್ಷಣೆ ಮಾಡಿದೆ. ಆತನನ್ನು ಪೋಷಕರ ಸುಪರ್ಧಿಗೆ ಒಪ್ಪಿಸುವ ನಿಟ್ಟಿನಲ್ಲಿ ಸುರಭಿ ಕೇಂದ್ರದ ವಶಕ್ಕೆ ಅಪ್ರಾಪ್ತನನ್ನು ಒಪ್ಪಿಸಲಾಗಿದೆ. ಈ ಬಗ್ಗೆ ರೈಲ್ವೆ ಪ್ರೊಟಕ್ಷನ್ ಫೋರ್ಸ್‌ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಸುದ್ದಿ 5 | ಸಾಗರದಲ್ಲಿ ಆಟೋ ಚಾಲಕರಿಗೆ ಎಚ್ಚರಿಕೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಸಾಗರ ಟೌನ್‌ನಲ್ಲಿ ಡಿವೈಎಸ್‌ಪಿ ಜಿಟಿ ನಾಯ್ಕ್ ರವರು ಸಾಗರ ಸುತ್ತಮುತ್ತ, ಟೆಂಪೋ, ಮಾಕ್ಸಿ ಕ್ಯಾಬ್‌ಗಳಲ್ಲಿ ಅಪ್ರಾಪ್ತರು ಡ್ರೈವ್ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಗಮನಕ್ಕೆ ಬಂದಿದೆ. ಅದೇ ರೀತಿಯಲ್ಲಿ ಆಟೋಗಳನ್ನು ನಗರದಲ್ಲಿ ಅಪ್ರಾಪ್ತರು ಚಾಲನೆ ಮಾಡುತ್ತಿರುವುದು ಸಹ ತಿಳಿದುಬಂದಿದೆ. ಹೀಗಾಗಿ ಆಟೋ ಚಾಲಕರು ಯೂನಿಫಾರಮ್‌ನ್ನು ಹಾಕುವುದು ಕಡ್ಡಾಯವಾಗಿದೆ. ಅಲ್ಲದೆ ಅಪ್ರಾಪ್ತರು ವಾಹನ ಚಾಲನೆ ಮಾಡಿದ್ದ ಪಕ್ಷದಲ್ಲಿ ಅಂತಹ ವಾಹನಗಳನ್ನ ಸೀಜ್ ಮಾಡುವುದಷ್ಟೆ ಅಲ್ಲದೆ ದಂಡ ಹಾಕಲಾಗುತ್ತದೆ. ಈ ನಿಟ್ಟಿನಲ್ಲಿ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
SUMMARY | shivamogga fast news
KEY WORDS |shivamogga fast news