ಪ್ರವಾಹ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರ ಭೇಟಿ | ಮಹತ್ವದ ವರದಾ ಯೋಜನೆ ಬಗ್ಗೆ ತಿಳಿಸಿದ ಮಧು ಬಂಗಾರಪ್ಪ
Shivamogga district in-charge minister Madhu Bangarappa visited flood-affected areas and announced a proposal to build a barrage from Varada moola to Soraba.

SHIVAMOGGA | MALENADUTODAY NEWS | Jul 21, 2024
ಶಿವಮೊಗ್ಗದಲ್ಲಿಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ವರದಾ ಮೂಲದಿಂದ ಸೊರಬದ ವರೆಗೆ ಬ್ಯಾರೆಜ್ ನಿರ್ಮಿಸುವ ಪ್ರಸ್ತಾವನೆಯ ಬಗ್ಗೆ ತಿಳಿಸಿದ್ದಾರೆ. ಈ ಸಂಬಂಧ 6 ಕಡೆ ಬ್ಯಾರೇಜ್ ನಿರ್ಮಿಸಿ ವರ್ಷದಲ್ಲಿ ಎರಡುಬೆಳೆ ತೆಗೆಯಲು ಕೃಷಿಕರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು
ಶಿವಮೊಗ್ಗ ಗುಡ್ ನ್ಯೂಸ್? | ಕೇಂದ್ರ ಬಜೆಟ್‌ನಲ್ಲಿ ಈ ಸಲ 10 ಸಾವಿರ ಕೋಟಿ ರೂಪಾಯಿ ಸಿಗುತ್ತಾ?
ಎರಡು ದಿನದಿಂದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ, ನನ್ನ ಕ್ಷೇತ್ರದಲ್ಲೂ ಸಾಕಷ್ಟು ಹಾನಿಯಾಗಿದೆ, ಜಿಲ್ಲೆಯ ಹಾನಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇನೆ. ಅನಧಿಕೃತ ಮನೆಗಳ ಕುಸಿತ ಪ್ರಕರಣದ ಬಗ್ಗೆ ಕಂದಾಯ ಸಚಿವರ ಜೊತೆಗೆ ಮಾತನಾಡುತ್ತೇನೆ. ಶಾಶ್ವತ ಪರಿಹಾರಕ್ಕೆ ಚರ್ಚೆ ನಡೆಸುತ್ತಿದ್ದೇನೆ ಎಂದರು
1600 ಬೀರೂರು ಶಿವಮೊಗ್ಗ ರೈಲ್ವೆ ಹಳಿ ಡಬ್ಲಿಂಗ್ ಯೋಜನೆ | DPR ರೆಡಿ | ಬಿವೈಆರ್ ಹೇಳಿದ್ದೇನು?
ಮಳೆಯಿಂದ ಮತ್ತಷ್ಟು ಅನಾವುತ ಸಂಭವಿಸುವ ಸಾಧ್ಯತೆ ಇದೆ, ಹೀಗಾಗಿ ಜನ ಸ್ವಲ್ಪ ಎಚ್ಚರಿಕೆ ಯಿಂದ ಇರಬೇಕಾಗುತ್ತದೆ ಎಂದ ಅವರು ಮನೆ ಬಿದ್ದವರಿಗೆ ಹೊಸ ಮನೆ ಕಟ್ಟಿಸಿಕೊಡುವ ಕೆಲಸ ಮಾಡುತ್ತೇವೆ. ಪ್ರಸ್ತುತ ಈಗ 1 ಲಕ್ಷದ 20 ಸಾವಿರ ಹಣ ನೀಡುತ್ತಿದ್ದೇವೆ ಎಂದರು. ಅಲ್ಲದೆ ಮಳೆಯಿಂದಾಗಿ ಮೃತ ಪಟ್ಟ ಇಬ್ಬರು ಕುಟುಂಬಸ್ಥರಿಗೆ ತಲಾ ಐದು ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
Shivamogga district in-charge minister Madhu Bangarappa visited flood-affected areas and announced a proposal to build a barrage from Varada moola to Soraba.