1 ದಿನದ ಮಗುವಿನ ಜೀವ ಉಳಿಸಲು ಜಿರೋ ಟ್ರಾಫಿಕ್ | ಬೈಕ್‌ನಲ್ಲಿ ಕುಳಿತ ಮಂಗಳಮುಖಿ ಮಾಡಿದ್ದೇನು? | ದಿನಕ್ಕೆರಡು ಸಲ ಹೆಜ್ಜೇನು ದಾಳಿ
Davanagere, Ambulance, Davanagere Police, Shivamogga Police, Zero Traffic, Hedgehog Attack, Hosanagara, Bidanur, Chikkapet, Transgender, Shivamogga Bus Stop, Meggan Hospital, Doddapet Police Station,
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 27, 2024
ದಾವಣಗೆರೆ | ನೆರೆಯ ದಾವಣಗೆರೆ ಜಿಲ್ಲೆಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗೂಸವೊಂದನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಲುವಾಗಿ ನಿನ್ನೆ ಶನಿವಾರ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನ ಕಲ್ಪಿಸಲಾಗಿತ್ತು. ಜೀರೋ ಟ್ರಾಫಿಕ್‌ನಲ್ಲಿ ಒಂದು ದಿನದ ಹಿಂದಷ್ಟೆ ಹುಟ್ಟಿದ ಮಗುವನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇದಕ್ಕಾಗಿ ಎರಡು ಜಿಲ್ಲೆಗಳ ಪೊಲೀಸರು ಹಾಗೂ ಆಂಬುಲೆನ್ಸ್ ಚಾಲಕರು ನೆರವಾಗಿದ್ದರು.
ಚೈನ್ ಕದ್ದ ಮಂಗಳಮುಖಿ
ಶಿವಮೊಗ್ಗ ಬಸ್ ನಿಲ್ದಾಣದ ಬಳಿ ರಾತ್ರಿ ಊಟ ಮುಗಿಸಿ ರೂಮಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನ ಅಡಗಟ್ಟಿದ ಮಂಗಳಮುಖಿಯೊಬ್ಬರು ಮೆಗ್ಗಾನ್ ಆಸ್ಪತ್ರೆಗೆ ಡ್ರಾಪ್ ಕೇಳಿದ್ದಾರೆ. ಅವರಿಗೆ ಡ್ರಾಪ್ ಮಾಡಿದ ವ್ಯಕ್ತಿ ರೂಮಿಗೆ ಹೋಗಿ ನೋಡಿದಾಗ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಮಾಯವಾಗಿತ್ತು. ಬೈಕ್‌ನಲ್ಲಿ ಕುಳಿತಿದ್ದಾಗ ಮಂಗಳಮುಖಿ, ಡ್ರಾಪ್ ನೀಡಿದ ವ್ಯಕ್ತಿ ಮೈಮೇಲೆ ಕೈಯಾಡಿಸಿದ ಹಾಗೆ ಮಾಡಿ ಚಿನ್ನದ ಸರವನ್ನ ಎಗರಿಸಿದ್ದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಜ್ಜೇನು ದಾಳಿ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬಿದನೂರು ಚಿಕ್ಕಪೇಟೆ ಬಳಿ ಒಂದೆ ದಿನ ಎರಡು ಸಹ ಹೆಜ್ಜೇನು ದಾಳಿ ನಡೆಸಿವೆ. ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಇಲ್ಲಿನ ಭಾಷಾ ಎಂಬವರ ಮನೆಯ ಬಳಿ ಹೆಜ್ಜೇನು ದಾಳಿ ನಡೆಸಿದ್ದು, ಇದರಿಂದಾಗಿ ಬಾಷಾ, ಪತ್ನಿ ಆಸ್ಮಾ ಬಾನು, ಮಕ್ಕಳಾದ ಆರೀಫ್, ಅನೀಫ್ ಎಂಬುವವರು ಗಾಯಗೊಂಡಿದ್ದಾರೆ. ಅವರಿಗೆ ಚಕಿತ್ಸೆ ಕೊಡಿಸಲಾಗಿದೆ. ಘಟನೆ ನಡೆದ ದಿನ ಬೆಳಗ್ಗೆ ಚಿಕಿತ್ಸೆ ಪಡೆದು ವಾಪಸ್ ಆದ ಬಾಷಾ ಹಾಗೂ ಅವರ ಪುತ್ರನ ಮೇಲೆ ಮತ್ತೆ ಸಂಜೆ ಹೆಜ್ಜೇನು ದಾಳಿ ನಡೆಸಿವೆ.
SUMMARY | Davanagere, Ambulance, Davanagere Police, Shivamogga Police, Zero Traffic, Hedgehog Attack, Hosanagara, Bidanur, Chikkapet, Transgender, Shivamogga Bus Stop, Meggan Hospital, Doddapet Police Station,
KEYWORDS | Davanagere, Ambulance, Davanagere Police, Shivamogga Police, Zero Traffic, Hedgehog Attack, Hosanagara, Bidanur, Chikkapet, Transgender, Shivamogga Bus Stop, Meggan Hospital, Doddapet Police Station,