ಕುಡಿದು ಬಂದು ಮಗುವನ್ನ ಎತ್ತಿಕೊಂಡು ಹೋದ ಪತಿ | 112 ಕರೆ ಮಾಡಿದ ಪತ್ನಿ | ಈ ದಿನದ ಇನ್ನಷ್ಟು ಸುದ್ದಿಗಳು

shivamogga daily news 

ಕುಡಿದು ಬಂದು ಮಗುವನ್ನ ಎತ್ತಿಕೊಂಡು ಹೋದ ಪತಿ | 112 ಕರೆ ಮಾಡಿದ ಪತ್ನಿ |  ಈ ದಿನದ ಇನ್ನಷ್ಟು ಸುದ್ದಿಗಳು
shivamogga daily news 

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 16, 2024 ‌‌ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಕುಡಿದು ಬಂದ ಪತಿರಾಯನೊಬ್ಬ ಐದು ತಿಂಗಳು ಮಗುವನ್ನ ಎತ್ತಿಕೊಂಡು ಹೋದ ಘಟನೆ ಸಂಬಂಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಪತಿರಾಯನನ್ನ ಹುಡುಕಿ ಆತನಿಂದ ಮಗುವನ್ನ ಪಡೆದು , ಸಂಬಂಧಿಕರ ಸಮ್ಮುಖದಲ್ಲಿ ದೂರುದಾರ ಮಹಿಳೆಗೆ ಆಕೆಯ ಮಗುವನ್ನ ವಾಪಸ್‌ ಹಸ್ತಾಂತರಿಸಿದ್ದಾರೆ. ಈ ಮೂಲಕ ಪ್ರಕರಣವನ್ನ ಸುಖಾಂತ್ಯಗೊಳಿಸಿದ್ದಾರೆ. 

ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವರ ವಿರುದ್ಧ ಕೇಸ್‌

ಶಿವಮೊಗ್ಗದ ತುಂಗಾನಗರ ಪೊಲೀಸ್‌ ಠಾಣೆಯ ಪೊಲೀಸರು ಸಂತೆಕಡೂರು ಸಮೀಪ ಜನರಿಗೆ ತೊಂದರೆ ಕೊಡುತ್ತಿದ್ದ ಇಬ್ಬರು ಯುವಕರನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅವರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಗಾಂಜಾ ಸೇವಿಸಿರುವುದು ಗೊತ್ತಾಗಿದೆ. ಈ ಸಂಬಂಧ  ಅಮೀರ್‌ ಜಾನ್‌ (27) ಮತ್ತು ಸಾಹಿಲ್‌ ಅಹಮದ್‌ (21) ಎಂಬುವವರನ್ನು ಬಂಧಿಸಿ, ಅವರ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಅಯ್ಯಪ್ಪ ಮಾಲಧಾರಿಯ ಬೈಕ್‌ ಕಳವು

ಶಿವಮೊಗ್ಗದ ತುಂಗಾನದಿಯಲ್ಲಿ ಸ್ನಾನಕ್ಕೆ ಹೋಗಿ ವಾಪಸ್‌ ಬರುವಷ್ಟರಲ್ಲಿ ಅಯ್ಯಪ್ಪಸ್ವಾಮಿ ಮಾಲಧಾರಿಯೊಬ್ಬರ ಬೈಕ್‌ ಕಳುವು ಮಾಡಿರುವ ಪ್ರಸಂಗವೊಂದು ಶಿವಮೊಗ್ಗ ವಾದಿ ಏ ಹುದಾ ಬಳಿ ನಡೆದಿದೆ. ಸೀಗೆಹಟ್ಟಿ ಅಂತಘಟ್ಟಮ್ಮ ದೇವಾಲಯದಲ್ಲಿ ಉಳಿದುಕೊಂಡಿದ್ದ ಅಯ್ಯಪ್ಪ ಸ್ವಾಮಿ ಮಾಲದಾರಿಯೊಬ್ಬರು ಬೆಳಗ್ಗೆ ತುಂಗಾ ನದಿಯಲ್ಲಿ ಸ್ನಾನಕ್ಕೆ ಎಂದು ತೆರಳಿದ್ದರು. ಇದೇ ವೇಳೆ ನದಿ ದಂಡೆ ಮೇಲೆ ನಿಲ್ಲಿಸಿದ್ದ ಬೈಕ್‌ನ್ನ ಯಾರೋ ಕಳ್ಳರು ಕದ್ದೊಯ್ದಿದ್ದಾರೆ.

SUMMARY |  shivamogga daily news 

KEY WORDS | shivamogga daily news