35, 50, 300 ರೂಪಾಯಿ ಕಮಿಷನ್ ಕೊಟ್ಟು ಮೂರು ಲಕ್ಷಕ್ಕೆ ಕೊಟ್ರು ಶಾಕ್ | ನಾಳೆ ನಿಮಗೂ ?
shivamogga cybercrime awareness , ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ
SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 28, 2024 | ಶಿವಮೊಗ್ಗದಲ್ಲಿ ದಿನಕ್ಕೊಂದು ಆನ್‌ಲೈನ್ ಪ್ರಾಡ್ ಕೇಸ್‌ಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಗೂಗಲ್ ರಿವ್ಯೂ ಹೆಸರಿನಲ್ಲಿ ನಂಬಿಕೆ ಮೂಡಿಸಿ ಬೇರೆ ಬೇರೆ ಆಮಿಷ ಒಡ್ಡಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಲಾಗಿದೆ. ಆ ಸಂಬಂಧ ಜಯನಗರ ಸ್ಟೇಷನ್ ವ್ಯಾಪ್ತಿಯಲ್ಲಿರುವ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಿಇಎನ್ ಪೊಲೀಸ್ ಠಾಣೆ ಶಿವಮೊಗ್ಗ
ವಾಟ್ಸಾಪ್‌ನಲ್ಲಿ ಬಂದ ಸಂದೇಶವನ್ನ ನಂಬಿದ ದೂರುದಾರರು ಆನ್ ಲೈನ್ ಸಂಸ್ಥೆಯೊಂದು ನೀಡಿದ ಕೆಲಸದ ಆಪರ್ ಒಪ್ಪಿದ್ದಾರೆ. ಗೂಗಲ್ ರಿವ್ಯೂ ಕೆಲಸ ಎಂದಾಗ ಅವರು ನಂಬಿ ಅದನ್ನ ಒಪ್ಪಿಕೊಂಡಿದ್ದರು. ಆ ನಂತರ ಸೂಚಿಸಿದ ಹೋಟೆಲ್‌ಗಳಿಗೆ ರೇಟಿಂಗ್ ನೀಡುವ ಆಪ್ಶನ್ ಕೊಟ್ಟಿದ್ದ ಸಂಸ್ಥೆ ಹೇಳಿದಂತೆ ನಡೆದುಕೊಂಡಿದ್ದಾರೆ. ಹೀಗೆ ಸಣ್ಣಪುಟ್ಟ ಅವಕಾಶಗಳನ್ನ ನೀಡಿದ ಸಂಸ್ಥೆ ಒಂದು ಹಂತದಲ್ಲಿ ಆಸೆ ತೋರಿಸಿ ಹೂಡಿಕೆ ಮಾಡುವಂತೆ ಆಮೀಷ ಒಡ್ಡಿದೆ. ಇದನ್ನ ನಂಬಿ 3.23.927 ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ.