ಸಾರ್ವಜನಿಕರೇ ಹುಷಾರ್‌, ಹೀಗೂ ಯಾಮಾರಿಸುತ್ತಾರೆ !?

shivamogga crime news 

ಸಾರ್ವಜನಿಕರೇ ಹುಷಾರ್‌, ಹೀಗೂ ಯಾಮಾರಿಸುತ್ತಾರೆ !?
shivamogga crime news 

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024 ‌‌ 

ದೊಡ್ಡಬಳ್ಳಾಪುರದ ವ್ಯಕ್ತಿಗೆ ರಾಣೆಬೆನ್ನೂರಿನ ವ್ಯಕ್ತಿಯೊಬ್ಬರು ಆಯನೂರಿನಲ್ಲಿ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ವಂಚಿಸಿದ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.  ದೊಡ್ಡಬಳ್ಳಾಪುರದ ನಂದಿಗುಂದ ಗ್ರಾಮದ ಬಾಯಣ್ಣ ಮೋಸಕ್ಕೆ ಒಳಗಾದವರು. ಇವರನ್ನ ಧರ್ಮಸ್ಥಳದಲ್ಲಿ ಭೇಟಿಯಾದ ರಾಣೇಬೆನ್ನೂರಿನ ವ್ಯಕ್ತಿಯೊಬ್ಬರು ಮೋಸಕ್ಕೆ ಒಳಗಾಗಿದ್ದಾರೆ. ನಾಲ್ಕು ಲಕ್ಷ ಮೌಲ್ಯ ಚಿನ್ನದ ನಾಣ್ಯ ನೀಡುವುದಾಗಿ ಆಯನೂರು ಬಳಿ ಕರೆಸಿಕೊಂಡ ಆರೋಪಿಗಳು ಅವರಿಗೆ ನಕಲಿ ನಾಣ್ಯ ಕೊಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಕೇಸ್‌ ದಾಖಲಾಗಿದೆ. 

ಇನ್ನೊಂದು ಪ್ರಕರಣದಲ್ಲಿ ಮುಖಪುಟ ಬ್ಯಾಂಕ್ ಸಾಲ ಕೊಡಿಸುವುದಾಗಿ ಹೇಳಿ ಮಹಿಳೆಗೆ 16‌ಲಕ್ಷ‌ರೂಪಾಯಿ ವಂಚಿಸಲಾಗಿದೆ. ಈ ಸಂಬಂಧ ಎಫ್‌ಐಆರ್‌ ಸಹ ದಾಖಲಾಗಿದೆ.  ವಿನೋಬ ನಗರದ ಶಿವಪ್ಪನಾಯಕ ಬಡಾವಣೆಯಲ್ಲಿನ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಸಬ್ಸಿಡಿ ರೂಪದ ಸಾಲ ಒದಗಿಸುವ ಆಮೀಷ ಒಡ್ಡಿದ್ದಾನೆ. ಆ ಬಳಿಕ ಅವರಿಂದ ಹಣ ಪಡೆದು ಸಾಲವನ್ನು ಸಹ ಕೊಡಿಸದೆ ವಂಚನೆ ಮಾಡಿದ್ಧಾನೆ ಎಂಬುದು ಪ್ರಕರಣದ ಸಾರಾಂಶ

ಶಿಕಾರಿಪುರದಲ್ಲಿ ದಾಖಲಾದ ಮತ್ತೊಂದು ಪ್ರಕರಣದ ಪ್ರಕಾರ, ಇಲ್ಲಿನ ಬ್ಯಾಂಕ್‌ ಒಂದರ ಡಿ ಗ್ರೂಪ್‌ ನೌಕರರು ಪಾಸ್‌ಬುಕ್‌ ಎಂಟ್ರಿ ಮಾಡುವ ಕೆಲಸ ಮಾಡುತ್ತಿದ್ದು, ಯಾರ ಪಾಸ್‌ಬುಕ್‌ನಲ್ಲಿ ಹೆಚ್ಚು ಹಣ ಇದೆ ಎಂದು ತಿಳಿದು ಅವರ ಮನೆಗೆ ಹೋಗಿ, ಅಪರಿಚಿತ ಸಂಸ್ಥೆಗಳ ಮೇಲೆ ಹೂಡಿಕೆ ಮಾಡುವಂತೆ ಆಮೀಷವೊಡ್ಡಿ ಮೋಸದ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಹಲವರಿಂದ 79 ಲಕ್ಷ ರೂಪಾಯಿಗಳನ್ನ ತಮ್ಮ ಅಕೌಂಟ್‌ಗೆ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಲಾಗಿದೆ.  

SUMMARY |    shivamogga crime news 

KEY WORDS | shivamogga crime news