ಶಿವಮೊಗ್ಗ ಪೊಲೀಸ್‌ ಇಲಾಖೆಯನ್ನ ಎಚ್ಚರಿಸಲಿದ್ಯಾ ಬಾಲಕಿಯ ಅಪಹರಣ ಯತ್ನ!? ಪುಟಾಣಿಯ ದೈರ್ಯ ಮೆಚ್ಚಬೇಕು?

shivamogga crime news , ಸ್ಕೂಲ್‌ನಿಂದ ಬರುತ್ತಿದ್ದ ಬಾಲಕಿಯನ್ನ ಅಪಹರಣಕ್ಕೆ ಯತ್ನಿಸಿರುವ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ ನಡೆದಿದೆ

ಶಿವಮೊಗ್ಗ ಪೊಲೀಸ್‌ ಇಲಾಖೆಯನ್ನ ಎಚ್ಚರಿಸಲಿದ್ಯಾ ಬಾಲಕಿಯ ಅಪಹರಣ  ಯತ್ನ!? ಪುಟಾಣಿಯ ದೈರ್ಯ ಮೆಚ್ಚಬೇಕು?
shivamogga crime news , ಬಾಲಕಿಯ ಅಪಹರಣ ಯತ್ನ

SHIVAMOGGA | MALENADUTODAY NEWS | ಮಲೆನಾಡು ಟುಡೆ 

Sep 29, 2024  | CRIME NEWS | ಶಿವಮೊಗ್ಗದಲ್ಲಿ ಮಿಸ್ಸಿಂಗ್‌ ಕೇಸ್‌ಗಳು ದಿನಕ್ಕೆ ಮೂರು ನಾಲ್ಕು ದಾಖಲಾಗುತ್ತವೆ. ಇದರ ನಡುವೆ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಪ್ರಮುಖ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅಪಹರಣ ಪ್ರಯತ್ನ ಇಡೀ ಜಿಲ್ಲೆಯ ಮುಖ್ಯ ವಲಯದಲ್ಲಿ ಆತಂಕ ಮೂಡಿಸುವಂತೆ ಮಾಡಿದೆ. (ಅಪ್ರಾಪ್ತ ಪ್ರಕರಣ ಕಾರಣಕ್ಕೆ ಯಾವುದೇ ವೈಯಕ್ತಿಕ ವಿವರ ನೀಡಿರುವುದಿಲ್ಲ)

ಸ್ಕೂಲ್‌ನಿಂದ ಬಾಲಕಿ ಅಪಹರಣಕ್ಕೆ ಯತ್ನ

ಕಳೆದ 24 ರಂದು ನಡೆದ ಘಟನೆ ಇದು. ಅಂದು ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ನಿವಾಸಿಯೊಬ್ಬರ ಮಗಳು ಸ್ಕೂಲ್‌ನಿಂದ ಆಟೋದಲ್ಲಿ ಬಂದು ಮನೆಯ ಹತ್ತಿರ ಇಳಿದಿದ್ದಾಳೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಬೈಕ್‌ ಸವಾರನೊಬ್ಬ, ಆ ಬಾಲಕಿಗೆ ನಿಮ್ಮಪ್ಪ ಕರೆದುಕೊಂಡು ಬರಲು ಹೇಳಿದ್ದಾರೆ ಬೈಕ್‌ ಹತ್ತು ಎಂದಿದ್ದಾನೆ. ಆ ಮಗು ಇಲ್ಲ ನಾನು ಬರಲ್ಲ ಎಂದಿದ್ದಾಳೆ. ಅದಕ್ಕೆ ಆ ಬೈಕ್‌ ಸವಾರ ಚಾಕಲೇಟ್‌ ಕೊಡುತ್ತೇನೆ ಬಾ ಎಂದಿದ್ದಾನೆ. ಅದಕ್ಕೂ ಬಾಲಕಿ ಒಪ್ಪದೆ ಹೋದಾಗ ಆ ಪುಟ್ಟಿಯ ಕೈ ಹಿಡಿದು ಎಳೆದಿದ್ದಾನೆ. ‌

ದೈರ್ಯ ತೋರಿದ ಪುಟಾಣಿ

ಪುಟಾಣಿ ಬುದ್ದಿವಂತಿಕೆ ತೋರಿ ಆತನಿಂದ ತಪ್ಪಿಸಿಕೊಂಡು ಓಡಿಹೋಗಿ ಮನೆ ಸೇರಿದ್ದಾಳೆ. ಮನೆಯಲ್ಲಿ ಪೋಷಕರಿಗೆ ನಡೆದಿದ್ದನ್ನ ವಿವರಿಸಿದ್ದಾಳೆ. ಆಕೆ ಹೇಳಿದ ಮಾಹಿತಿ ಆಧರಿಸಿ ಪೋಷಕರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಶಿವಮೊಗ್ಗ ಪೊಲೀಸ್

ಈ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಗಂಭೀರವಾಗಿ ಪರಿಗಣಿಸಬೇಕಿದೆ. ಶಿವಮೊಗ್ಗದ ನಾಪತ್ತೆ ಪ್ರಕರಣಗಳು ಒಂದು ರೀತಿಯಲ್ಲಿ ಅನುಮಾನಸ್ಪದವಾಗಿ ಕಾಡುತ್ತಿದ್ದರೇ, ಇತ್ತ ನಡೆದಿರುವ ಅಪಹರಣ ಪ್ರಯತ್ನ ಮುಂದಿನ ಅಪಾಯದ ಮನ್ಸೂಚನೆ ಹೇಳುತ್ತಿರುವಂತಿದೆ. ಇನ್ನೊಂದೆಡೆ ಇತ್ತೀಚೆಗೆ ನಾಪತ್ತೆಯಾದ ಎರಡು ಪ್ರಕರಣಗಳಲ್ಲಿ ಕಳೆದುಹೋದವರ ಮೃತದೇಹ ಪತ್ತೆಯಾಗಿದೆ. ಪ್ರಕರಣಗಳ ನಡುವಿನ ಡಾಟ್‌ಗಳನ್ನ ಪೊಲೀಸರೇ ಜೋಡಿಸಬೇಕಿದೆ.