ಸಿಟಿ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸಾವು | ಸಿಸಿ ಕ್ಯಾಮರಾದಲ್ಲಿ ಕಂಡಿದ್ದೇನು?!
student died , city bus in shivamogga

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 13, 2025
ಶಿವಮೊಗ್ಗ | ಸಿಟಿಯಲ್ಲಿ ನಿನ್ನೆ ನಡೆದ ವಿದ್ಯಾರ್ಥಿಯ ಸಾವಿನ ಘಟನೆಯ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ಮಲೆನಾಡು ಟುಡೆಗೆ ಲಭ್ಯವಾಗಿದೆ. ನಿನ್ನೆದಿನ ಬಿಹೆಚ್ ರೋಡ್‌ನಲ್ಲಿ ಮೈಲಾರೇಶ್ವರ ದೇವಾಲಯದ ಬಳಿಯಲ್ಲಿ ಬಸ್ ಪುಟ್ ಬೋರ್ಡ್ ಮೇಲೆ ಪ್ರಯಾಣಿಸ್ತಿದ್ದ ವಿದ್ಯಾರ್ಥಿಯೊಬ್ಬ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದ. ಈ ಘಟನೆ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೂ ಕಾರಣವಾಗಿದ್ದು, ಸಿಸಿ ಕ್ಯಾಮರಾದಲ್ಲಿ ಕಾಣುತ್ತಿರುವ ದೃಶ್ಯದಲ್ಲಿ ವಿದ್ಯಾರ್ಥಿ ಕೆಳಕ್ಕೆ ಬಿದಿದ್ದು ಸಹ ಬಸ್‌ನವರಿಗೆ ಗೊತ್ತಾಗದೆ ಮುಂದಕ್ಕೆ ಸಾಗಿರುವುದು ಕಾಣುತ್ತಿದೆ.
ಇದೆ ಸುದ್ದಿ :ಶಿವಮೊಗ್ಗ ಸಿಟಿ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸಾವು | ನಡೆದಿದ್ದೇನು ಗೊತ್ತಾ?
ನಡೆದಿದ್ದೇನು?
ಗುರುಪುರದಿಂದ ವಿದ್ಯಾರ್ಥಿಯೊಬ್ಬ ಸಿಟಿಯಲ್ಲಿನ ಕಾಲೇಜಿಗೆ ಬರುತ್ತಿದ್ದ. ಸಾಮಾನ್ಯವಾಗಿ ಸಿಟಿ ಹೊರಗಡೆಯಿಂದ ಬರುವ ವಿದ್ಯಾರ್ಥಿಗಳು ಸಿಟಿ ಬಸ್‌ಗಳಲ್ಲಿಯೇ ಸಂಚರಿಸುತ್ತಾರೆ. ಅದೇ ರೀತಿಯಲ್ಲಿ ಈತನು ಬರುತ್ತಿದ್ದ. ಆದರೆ ಬಸ್ ರಶ್ ಇದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯು ಉಳಿದ ಕೆಲವರ ಜೊತೆಯಲ್ಲಿ ಬಸ್‌ನ ಪುಟ್‌ಬೋರ್ಡ್‌ನ ಮೇಲೆ ನಿಂತಿದ್ದ. ಅಲ್ಲಿದ್ದ ರಾಡ್ ಹಿಡಿದು ನಿಂತಿದ್ದ ವಿದ್ಯಾರ್ಥಿ ನಗರದ ಮೈಲಾರೇಶ್ವರ ದೇವಾಲಯದ ಬಳಿ ಬಸ್‌ನಿಂದ ಕೆಳಕ್ಕೆ ಬಿದ್ದಿದ್ದಾನೆ. ತುಂಬಿದ್ದ ಪ್ರಯಾಣಿಕರ ನಡುವೆ ವೇಗವಾಗಿ ಚಾಲನೆ ಮಾಡುತ್ತಿದ್ದ ಚಾಲಕ, ದೇವಾಲಯದ ಬಳಿ ಸಡನ್ ಆಗಿ ಬ್ರೇಕ್ ಹಾಕಿದ್ದಾನೆ. ಪರಿಣಾಮ, ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದ ವಿದ್ಯಾರ್ಥಿ ಅಲ್ಲಿಯೇ ಸಾವನ್ನಪ್ಪಿದ್ದಾನೆ.
ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೃಶ್ಯದಲ್ಲಿ ವಿದ್ಯಾರ್ಥಿ ಬೀಳುತ್ತಲೇ ಎದುರುಗಡೆಯಿಂದ ಬರುವ ವಾಹನಗಳ ಬಸ್ ಚಾಲಕನಿಗೆ ಕೈ ತೋರಿಸಿ ಬಸ್ ನಿಲ್ಲಿಸುವಂತೆ ಸೂಚಿಸುತ್ತಿರುವುದು ಕಾಣುತ್ತಿದೆ. ಸದ್ಯ ಘಟನೆಯ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
View this post on Instagram
SUMMARY |student died after fell down from city bus in shivamogga
KEY WORDS | student died , city bus in shivamogga