ಕರಾವಳಿಯಲ್ಲಿ ಸಿಕ್ಕಿಬಿದ್ದ ಶಿವಮೊಗ್ಗದ ತಾಜು, ರೂಹಾನ್‌ | ಇಬ್ಬರ‌ ಕೇಸ್‌ಗಳೇ ಅಚ್ಚರಿ!

shivamogga accused arrested in padubidri

ಕರಾವಳಿಯಲ್ಲಿ ಸಿಕ್ಕಿಬಿದ್ದ ಶಿವಮೊಗ್ಗದ ತಾಜು, ರೂಹಾನ್‌ | ಇಬ್ಬರ‌ ಕೇಸ್‌ಗಳೇ ಅಚ್ಚರಿ!
shivamogga accused arrested in padubidri

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 13, 2025 ‌‌ 

ಶಿವಮೊಗ್ಗದ ಹೆಬಿಚ್ಯುಲ್‌ ಕಳ್ಳರಿಬ್ಬರು ಕರಾವಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರ ವಿರುದ್ದ ಕೇಸುಗಳ ರಾಶಿಯೇ ಇರುವುದು ಅಚ್ಚರಿ ಮೂಡಿಸುತ್ತಿದೆ. 

ಪುಡುಬಿದ್ರೆ ಪೊಲೀಸ್‌ ಠಾಣೆ ಪೊಲೀಸರು, ಬೈಕ್‌ ಕಳವು ಪ್ರಕರಣದ ತನಿಖೆ ನಡೆಸ್ತಿದ್ದರು. ಈ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಪ್ರಕರಣದ ಆರೋಪಿಗಳು ಶಿವಮೊಗ್ಗದವರು ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಬಲೆ ಬೀಸಿ ಇಬ್ಬರು ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ. ಬಂಧಿತರು ಶಿವಮೊಗ್ಗದ ಮೊಹಮ್ಮದ್‌ ರೂಹಾನ್‌ ಮತ್ತು ಶಿವಮೊಗ್ಗದ ತಾಜುದ್ದೀನ್‌ ಯಾನೆ ತಾಜು. 

ಇವರಿಬ್ಬರು ಕಾರಿನಲ್ಲಿ ಬಂದು ಪಡುಬಿದ್ರೆಯ ಮುಂಡ್ಕೂರು ಎಂಬಲ್ಲಿ ಜನವರಿ 21 ರಂದು ಬುಲೆಟ್‌ ಬೈಕ್‌ವೊಂದನ್ನ ಕಳವು ಮಾಡಿದ್ದರು. ಇದೇ ಪ್ರಕರಣದಲ್ಲಿ ಆರೋಪಿಗಳನ್ನ ಬಂಧಿಸಿದ ಪೊಲೀಸರು, ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ನಡುವೆ ಪೊಲೀಸರಿಗೆ ಆರೋಪಿಗಳ ಕ್ರೈಂ ಹಿಸ್ಟರಿ

ಹೌದು, ಇಬ್ಬರು ಆರೋಪಿಗಳ ಪೈಕಿ ಆರೋಪಿ ತಾಜು ವಿರುದ್ಧ ಶಿವಮೊಗ್ಗ ಕೋಟೆ ಪೊಲೀಸ್‌ ಠಾಣೆ, ವಿನೋಬನಗರ ಪೊಲೀಸ್‌ ಠಾಣೆ, ತುಂಗಾ ನಗರ ಪೊಲೀಸ್‌ ಠಾಣೆ ಹಾಗೂ ದೊಡ್ಡಪೇಟೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಕಳವು ಪ್ರಕರಣದ ಕೇಸ್‌ಗಳಿವೆ. ಇತ್ತ ಆಗುಂಬೆ ಪೊಲೀಸ್‌ ಠಾಣೆಯಲ್ಲಿ ದರೋಡೆ, ವಿದ್ಯಾರ್ಥಿಯ ಅಪಹರಣ, ವಾಹನ ಕಳವು ಕೇಸ್‌ ಇದೆ. ಸಾಗರ ನಗರ ಮತ್ತು ಗ್ರಾಮಾಂತರ ಪೊಲೀಸ್‌ ಠಾಣೆಗಳಲ್ಲಿ ದರೋಡೆ ಮತ್ತು ವಾಹನ ಕಳ್ಳತನ ಪ್ರಕರಣ ಮತ್ತು ಹಾಸನ ಜಿಲ್ಲೆಯಲ್ಲಿ ದರೋಡೆ ಮತ್ತು ಮನೆ ಕಳವು ಪ್ರಕರಣ, ಧಾರವಾಡ ನಗರ ಠಾಣೆಯಲ್ಲಿ ವಾಹನ ಕಳವು ಮತ್ತು ಮನೆ ಕಳವು ಪ್ರಕರಣ ಈತನ ಮೇಲಿದೆ.  

ಆರೋಪಿ ಮೊಹಮ್ಮದ್‌ ರೂಹಾನ್‌ ವಿರುದ್ಧ ಬೆಂಗಳೂರು ಜಿಲ್ಲೆಯ ಜಿಗಣಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ಕಳವು, ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಅಪಹರಣ ಮತ್ತು ಕೋಟೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ವಾಹನ ಕಳವು ಪ್ರಕರಣವಿದೆ. ಈ ಇಬ್ಬರು ಆರೋಪಿಗಳನ್ನು ಹಿಡಿದಿರುವ ಪಡುಬಿದ್ರಿ ಪೊಲೀಸರು, ಇನ್ನಷ್ಟು ಕ್ರೈಂ ಆಗುವುದನ್ನು ತಪ್ಪಿಸಿದ್ದಾರೆ. 

KEY WORDS | shivamogga accused arrested in padubidri