MYSORE TRAIN | ಮೈಸೂರು ಶಿವಮೊಗ್ಗ , ತಾಳಗುಪ್ಪ-ಮೈಸೂರು ಟ್ರೈನ್ | ದಸರಾ ಪ್ರಯುಕ್ತ ಹೆಚ್ಚು ಕಡೆ ನಿಲುಗಡೆಗೆ ಅವಕಾಶ
shivamogga Mysore train updates, ಶಿವಮೊಗ್ಗ-ಮೈಸೂರು ಟ್ರೈನ್, ತಾಳಗುಪ್ಪ- ಮೈಸೂರು ರೈಲು
SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 1, 2024 | ದಸರಾ ಹಬ್ಬಗಳ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯ ನಾಲ್ಕು ಟ್ರೈನ್‌ಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕವಾಗಿ ನಾಲ್ಕು ಕಡೆ ನಿಲುಗಡೆಗೆ ಅವಕಾಶ ನೀಡಿದೆ.ಅದರ ವಿವರ ಹೀಗಿದೆ.
ಮೈಸೂರು-ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್ಪ್ರೆಸ್ (16225/16226) ಮತ್ತು ಮೈಸೂರು-ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್ಪ್ರೆಸ್ (ರೈಲು ಸಂಖ್ಯೆ 16222/16221) ರೈಲುಗಳಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ನೀಡಿ ನೈಋತ್ಯ ರೈಲ್ವೆ ವಲಯ ತನ್ನ ಪ್ರಕಟಣೆ ನೀಡಿದೆ. ಈ ಆದೇಶ ಅಕ್ಟೋಬರ್ 9 ರಿಂದ 13 ರವರೆಗೆ ಜಾರಿಯಲ್ಲಿರುತ್ತವೆ
ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ ಬೆಳಗೊಳ, ಕೃಷ್ಣರಾಜಸಾಗರ, ಕಲ್ಲೂರು ಯಡಹಳ್ಳಿ, ಸಾಗರಕಟ್ಟೆ, ಡೋರ್ನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ, ಹೊಸ ಅಗ್ರಹಾರ ಮತ್ತು ಮಾವಿನಕೆರೆಯಲ್ಲಿ ತಾತ್ಕಾಲಿಕ ನಿಲುಗಡೆಯನ್ನು ಹೊಂದಿರುತ್ತದೆ
ಹಿಂತಿರುಗುವಾಗ ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್‌ಪ್ರೆಸ್‌ಗೆ ಮಾವಿನಕೆರೆ, ಹೊಸ ಅಗ್ರಹಾರ, ಅರ್ಜುನಹಳ್ಳಿ, ಹಂಪಾಪುರ, ಡೋರ್ನಹಳ್ಳಿ, ಸಾಗರಕಟ್ಟೆ, ಕಲ್ಲೂರು ಯಡಹಳ್ಳಿ, ಕೃಷ್ಣರಾಜಸಾಗರ ಮತ್ತು ಬೆಳಗೊಳದಲ್ಲಿ ತಾತ್ಕಾಲಿಕ ನಿಲುಗಡೆ ಇರುತ್ತದೆ.
ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್‌ಪ್ರೆಸ್‌ಗೆ ಕೃಷ್ಣರಾಜಸಾಗರ, ಕಲ್ಲೂರು ಯಡಹಳ್ಳಿ, ಡೋರ್ನಹಳ್ಳಿ, ಹಂಪಾಪುರ ಮತ್ತು ಅರ್ಜುನನಹಳ್ಳಿಯಲ್ಲಿ ತಾತ್ಕಾಲಿಕ ನಿಲುಗಡೆ ಇರುತ್ತದೆ
ಇದೇ ಟ್ರೈನ್ ವಾಪಸ್ ಬರುವಾಗ ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಡೈಲಿ ಎಕ್ಸ್‌ಪ್ರೆಸ್‌ಗೆ ಅರ್ಜುನಹಳ್ಳಿ, ಹಂಪಾಪುರ, ಡೋರ್ನಹಳ್ಳಿ, ಕಲ್ಲೂರು ಯಡಹಳ್ಳಿ ಮತ್ತು ಕೃಷ್ಣರಾಜಸಾಗರದಲ್ಲಿ ತಾತ್ಕಾಲಿಕ ನಿಲುಗಡೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.