TV ರಿಮೋಟ್‌ಗಾಗಿ ಪ್ರಾಣ ಬಿಟ್ಟಳಾ ಅಪ್ರಾಪ್ತೆ? | ರೈಲ್ವೆ ಟ್ರ್ಯಾಕ್‌ ಬಳಿ ಸಿಕ್ಕ ಶವ ಸರ್ಕಾರಿ ನೌಕರನದ್ದು? | ಮಹಿಳೆಯ ಕೃತ್ಯಕ್ಕೆ ಸಿಸಿ ಕ್ಯಾಮರಾದ ಸಾಕ್ಷ್ಯ

shivamoga fast news 

TV ರಿಮೋಟ್‌ಗಾಗಿ ಪ್ರಾಣ ಬಿಟ್ಟಳಾ ಅಪ್ರಾಪ್ತೆ? | ರೈಲ್ವೆ ಟ್ರ್ಯಾಕ್‌ ಬಳಿ ಸಿಕ್ಕ ಶವ ಸರ್ಕಾರಿ ನೌಕರನದ್ದು? | ಮಹಿಳೆಯ ಕೃತ್ಯಕ್ಕೆ ಸಿಸಿ ಕ್ಯಾಮರಾದ ಸಾಕ್ಷ್ಯ
shivamoga fast news 

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024 ‌‌ 

ಶಿವಮೊಗ್ಗದ ತುಂಗಾನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅಪ್ತಾಪ್ತೆಯೊಬ್ಬರು ಟಿವಿ ರಿಮೋಟ್‌ ನೀಡದಿರುವ ಕಾರಣಕ್ಕೆ ಸಿಟ್ಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಕಂಪ್ಲೆಂಟ್‌ ದಾಖಲಾಗಿದ್ದು ಅಪ್ರಾಪ್ತೆಯು ಇಲಿಪಾಷಾಣ ಸೇವಿಸಿ ಅಸ್ವಸ್ಥರಾಗಿದ್ದು, ಅವರನ್ನ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು., ಆದರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 

ಮೃತದೇಹ ಗುರುತು ಪತ್ತೆ

ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗ ನಗರದ ಶೇಷಾದ್ರಿಪುರಂ ಬಳಿಯಲ್ಲಿ ರೈಲ್ವೆ ಹಳಿ ಮೇಲೆ ಪತ್ತೆಯಾದ ಶವದ ಗುರುತು ಬಯಲಾಗಿದೆ. ಮೃತರನ್ನ ನಿವೃತ್ತ ಸರ್ಕಾರಿ ನೌಕರ ಎಂದು ತಿಳಿದುಬಂದಿದೆ.70 ವರ್ಷದ ಚಿಕ್ಕನರಸಯ್ಯ ಎಂಬವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 



ಉಂಗುರ ಕದ್ದ ಕಳ್ಳಿ

 

ಇತ್ತ ಶಿವಮೊಗ್ಗ ನಗರದ ದುರ್ಗಿಗುಡಿ ಮುಖ್ಯರಸ್ತೆಯಲ್ಲಿರುವ ಜ್ಯುವೆಲರಿ ಅಂಗಡಿಯೊಂದರಲ್ಲಿ ಚಿನ್ನಖರೀದಿಗೆ ಬಂದ ಮಹಿಳೆಯೊಬ್ಬರು ಉಂಗುರ ಕದ್ದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸ್ಟಾಕ್‌ ಚೆಕ್‌ ಮಾಡುವ ವ್ಯತ್ಯಾಸವಾದಾಗ ಸಿಸಿ ಕ್ಯಾಮಾರಾ ಪರಿಶೀಲಿಸಿದ ಮಾಲೀಕರಿಗೆ ಅದರಲ್ಲಿ ಮಹಿಳೆಯು ಉಂಗುರ ಖರೀದಿ ವೇಳೆ ಒಂದು ಉಂಗುರವನ್ನ ಕದ್ದಿರುವುದು ಗೊತ್ತಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

SUMMARY |  shivamoga fast news 

KEY WORDS | shivamoga fast news