shiralakoppa police raid and sp statement ಶಿರಾಳಕೊಪ್ಪ, ಶಿಕಾರಿಪುರ, ಶಿವಮೊಗ್ಗ : August 06 2025 : ನಿನ್ನೆ ದಿನ ಶಿರಾಳಕೊಪ್ಪದಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಸಲ್ಲದ ವದಂತಿಗಳು ಹಬ್ಬಲು ಆರಂಭವಾಗಿದ್ದವು! ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಇಲ್ಲದ ಸುದ್ದಿಗಳನ್ನು ಹರಡಲು ಸಹ ಆರಂಭಿಸಿದ್ದರು. ಈ ವಿಚಾರದಲ್ಲಿ ತಕ್ಷಣವೆ ಅಲರ್ಟ್ ಆದ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಪೊಲೀಸ್ ವಾಟ್ಸಾಪ್ ಗ್ರೂಪ್ನಲ್ಲಿ ಮಾಧ್ಯಮ ಸಂದೇಶವನ್ನು ರವಾನಿಸಿದ್ದಷ್ಟೆ ಅಲ್ಲದೆ ನಡೆದ ಘಟನೆಯ ವಿವರಗಳನ್ನು ಸಹ ನೀಡಿ, ಹೆಚ್ಚಿನ ಸ್ಪಷ್ಟತೆಗೆ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಈ ಮೂಲಕ ಮಿಥುನ್ ಕುಮಾರ್ ಸುಳ್ಳು ಸುದ್ದಿಗಳಿಗೆ ಅಡ್ಡವಾದರು!
ಇದನ್ನು ಸಹ ಓದಿ : ವರಮಹಾಲಕ್ಷ್ಮೀ ಹಬ್ಬ!ವೃತ ಆಚರಣೆ, ಪೂಜೆ ಹೇಗೆ? https://malenadutoday.com/celebrate-varamahalakshmi-habba-2025/

ಶಿರಾಳಕೊಪ್ಪದಲ್ಲಿ ನಡೆದಿದ್ದೇನು?
ಹಾಗಾದರೆ ಶಿರಾಳಕೊಪ್ಪದಲ್ಲಿ ನಿನ್ನೆ ನಡೆದಿದ್ದು ಏನು ಎನ್ನುವುದನ್ನು ಗಮನಿಸುವುದಾದರೆ, ಶಿರಾಳಕೊಪ್ಪ ಪಟ್ಟಣದ ಹಳ್ಳೂರು ವೃತ್ತದಲ್ಲಿರುವ ಒಂದು ಮನೆಯಲ್ಲಿ ಗೋಮಾಂಸ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಇಲ್ಲಿನ ಪೊಲೀಸರಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಬ್ ಇನ್ಸ್‌ಪೆಕ್ಟರ್ ಟಿ.ಬಿ. ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ರೇಡ್ ಮಾಡಿದ್ದರು. ಈ ವೇಳೆ ಮನೆಯಲ್ಲಿದದ್ದವರು ಪೊಲೀಸರ ಡ್ಯೂಟಿ ಅಡ್ಡಿಪಡಿಸಿದ್ದಾರೆ. ಬಳಿಕ ಪೊಲೀಸರು ತಮ್ಮ ಕಾರ್ಯಾಚರಣೆ ಮುಂದುವರಿಸಿ ತಮ್ಮ ಕರ್ತವ್ಯಕ್ಕೆ ಅಡ್ಡ ಬಂದವರ ವಿರುದ್ಧ ಕೇಸ್ ದಾಖಲಿಸಿದ್ದಷ್ಟೆ ಅಲ್ಲದೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಬಲೆ ಬೀಸಿದ್ದಾರೆ.

ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಸಂದೇಶ
ಈ ಬಗ್ಗೆ ಮಾಧ್ಯಮ ಸಂದೇಶ ರವಾನಿಸಿದ ಎಸ್ಪಿ ಮಿಥುನ್ ಕುಮಾರ್ ಶಿರಾಳಕೊಪ್ಪ ಪಟ್ಟಣದಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ನಮ್ಮ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ ಲಭಿಸಿದೆ. ತಕ್ಷಣ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ (police raid)ಆರೋಪಿಯ ಮನೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ, ಆರೋಪಿಯ ಪುತ್ರ ನಮ್ಮ ಪಿಎಸ್‌ಐ ಅವರನ್ನು ತಡೆದು, “ಇದು ನಮ್ಮ ಮನೆ, ನೀವು ಯಾಕೆ ಒಳಗೆ ಬರುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಪಿಎಸ್‌ಐ, “ನಮ್ಮ ಬಳಿ ವಿಶ್ವಾಸಾರ್ಹ ಮಾಹಿತಿ ಇದೆ, ನಾವು ದಾಳಿ ನಡೆಸಬೇಕು” ಎಂದು ಹೇಳಿದ್ದಾರೆ. ನಂತರ ಅವರು ಮನೆ ಪ್ರವೇಶಿಸಿ ಅಲ್ಲಿ ಇರಿಸಲಾಗಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ವಾಸ್ತವವಾಗಿ ನಡೆದ ಘಟನೆ ಇಷ್ಟೇ. ಯಾವುದೇ ತಪ್ಪು ಅಥವಾ ಸುಳ್ಳು ಸುದ್ದಿಗಳನ್ನು ದಯವಿಟ್ಟು ಹೆಚ್ಚಿನ ಸ್ಪಷ್ಟೀಕರಣ ಬೇಕಿದ್ದರೆ ನೀವು ನಮ್ಮನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
shiralakoppa police raid and sp statement
ಇದನ್ನು ಸಹ ಓದಿ : 24 ರಂದು ಕರ್ನಾಟಕ ಸ್ಟಾರ್ ಸಿಂಗರ್ ಸೀಜನ್ 02 ಕಾರ್ಯಕ್ರಮ : ಯಾರೆಲ್ಲಾ ಭಾಗವಹಿಸಬಹುದು : ಪ್ರಥಮ ಬಹುಮಾನ ಎಷ್ಟು ಗೊತ್ತಾ? https://malenadutoday.com/karnataka-star-singer-audition-shivamogga/
