ಶೇಂಗಾ ಸಿಪ್ಪೆ ವಿಚಾರಕ್ಕೆ ಹೊಡೆದಾಟ | ತಲೆ ಒಡೆದು ಓರ್ವ ಆಸ್ಪತ್ರೆಗೆ | ಇನ್ನೊಬ್ಬ ಅರೆಸ್ಟ್
shiralakoppa news today | ಶಿರಾಳಕೊಪ್ಪದಲ್ಲಿ ಹೋಟೆಲ್ ಒಂದರ ಮುಂದೆ ಈ ಘಟನೆ ನಡೆದಿದ್ದು, ಶೇಂಗಾ ಸಿಪ್ಪೆ ಬಿಸಾಕುವ ವಿಚಾರಕ್ಕೆ ಹೊಡೆದಾಟವಾಗಿದೆ
SHIVAMOGGA | MALENADUTODAY NEWS | Aug 18, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆಯಲ್ಲಿ ಶೆಂಗಾ ಬೀಜದ ಸಿಪ್ಪೆ ವಿಚಾರಕ್ಕೆ ಗಲಾಟೆಯಾಗಿ ವ್ಯಕ್ತಿಯೊಬ್ಬರ ತಲೆಯಿಂದ ರಕ್ತ ಬರುವ ಹಾಗೆ ಹೊಡೆದ ಪ್ರಸಂಗವೊಂದು ನಡೆದಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಶಿರಾಳಕೊಪ್ಪದಲ್ಲಿ ನಡೆದ ಘಟನೆ
ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪ ಪೇಟೆ ಹಿರೇಕೆರೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಹೋಟೆಲ್ ಒಂದರ ಮುಂದೆ ಕುಳಿತಿದ್ದ ಇಬ್ಬರ ನಡುವೆ ಶೇಂಗಾ ಸಿಪ್ಪೆ ಹಾಕುವ ವಿಚಾರಕ್ಕೆ ಗಲಾಟೆ ಆರಂಭವಾಗಿದೆ.
ಇದನ್ನ ಸಹ ಓದಿ : Job news |ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು | ಇಲ್ಲಿದೆ ವಿವರ
ಆ ಬಳಿಕ ಇದೇ ವಿಚಾರಕ್ಕೆ ಇಬ್ಬರ ನಡುವೆ ಹೊಡೆದಾಟವಾಗಿದೆ. ಈ ನಡುವೆ ಒಬ್ಬ ಇನ್ನೊಬ್ಬನ ತಲೆಗೆ ಹೊಡೆದಿದ್ದಾನೆ. ಘಟನೆಯಲ್ಲಿ ಸಂಜಯ್ ಎಂಬವರು ಗಾಯಗೊಂಡಿದ್ದು, ಅಲಿ ಎಂಬವರನ್ನ ಪೊಲೀಸರು ಬಂದಿಸಿದ್ದಾರೆ ಎಂದು ತಿಳಿದು ಬಂದಿದೆ.