SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 9, 2024 shimoga Fast news
ಶಿವಮೊಗ್ಗ ಜಿಲ್ಲೆಯಲ್ಲ ನಡೆದ ವಿವಿಧ ಘಟನೆಗಳ ಸಂಕ್ಷಿಪ್ತ ವಿವರಗಳನ್ನ ನೀಡುವ ಮಲೆನಾಡು ಟುಡೆ ಸುದ್ದಿ ವಿಭಾಗದ ವರದಿಯ ವಿವರ ಹೀಗಿದೆ.
Holehonnuru police station ಹುಡುಗಿ ವಿಚಾರಕ್ಕೆ ಮಚ್ಚಿನೇಟು
ತಮ್ಮ ಹುಡುಗಿ ವಿಚಾರಕ್ಕೆ ಬರಬೇಡ ಎಂದು ಬುದ್ದಿ ಹೇಳಿದರು ಕೇಳಿಲ್ಲ ಎಂಬ ಕಾರಣಕ್ಕೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪರಸ್ಪರ ಹೊಡೆದಾಟ ನಡೆದಿದೆ. ಶನಿವಾರ ನಡೆದ ಹೊಡೆದಾಟದಲ್ಲಿ ಓರ್ವನಿಗೆ ಇರಿಯಲಾಗಿದ್ದು, ಇಬ್ಬರಿಗೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಪರ-ವಿರೋಧ ದೂರು ದಾಖಲಾಗಿದ್ದು ಒಟ್ಟು 20 ಕ್ಕೂ ಹೆಚ್ಚು ಮಂದಿ ವಿರುದ್ಧ ಕೇಸ್ ದಾಖಲಾಗಿದೆ.

Shimoga hosamane ಹೊಸಮನೆಯಲ್ಲಿ ಹೊಡೆದಾಟ
ಇನ್ನು ಶಿವಮೊಗ್ಗದ ಹೊಸಮನೆಯಲ್ಲಿಯು ರೌಡಿ ಗ್ಯಾಂಗ್ ಹಾವಳಿ ಮುಂದುವರಿದಿದೆ. ಹಬ್ಬದ ಸಂಭ್ರಮದ ನಡುವೆ ಕಡ್ಡಿ ಮಧು ಗ್ಯಾಂಗ್ ತನ್ನ ವಿರೋಧಿ ಹುಡುಗರ ಮೇಲೆ ಅಟ್ಯಾಕ್ ಮಾಡಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಮೂವರು ಹಲ್ಲೆಗೊಳಗಾಗಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲರ ವಿರುದ್ಧವೂ ಕ್ರಮಕ್ಕೆ ಮುಂದಾಗಿದ್ದಾರೆ.
Shimoga train news ರೈಲಿಗೆ ಸಿಲುಕಿ ಯುವಕ ಸಾವು
ಶಿವಮೊಗ್ಗ ಭದ್ರಾವತಿ ನಡುವೆ ಹಾದು ಹೋಗಿರುವ ರೈಲ್ವೆ ಹಳಿ ಮೇಲೆ ಕಳೆದ ಶನಿವಾರ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ರೈಲಿಗೆ ಸಿಲುಕಿ ಸುಮಾರು ಮೂವತ್ತು ವರ್ಷದ ಯುವಕ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಈತನ ಗುರುತು ಪತ್ತೆಯಾಗಿಲ್ಲ. ಕೈ ಮೇಲೆ ಅಮ್ಮಾ ಎಂಬ ಹಚ್ಚೆ ಇದ್ದು, ಈ ಸಂಬಂಧ ಗುರುತು ಪತ್ತೆಗಾಗಿ ರೈಲ್ವೆ ಇಲಾಖೆ ಪ್ರಕಟಣೆ ನೀಡಿದೆ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ