ಶಿವಮೊಗ್ಗ ವಿಮಾನ ನಿಲ್ದಾಣ | ಕೆಲಸವಾಗದಿರಲು ಉಸ್ತುವಾರಿ ಸಚಿವರೇ ಕಾರಣವೆಂದ ಬಿವೈ ರಾಘವೇಂದ್ರ? ಏನಿದು
Shimoga Airport | BY Raghavendra blames minister in-charge for not doing work? What is this?
SHIVAMOGGA | MALENADUTODAY NEWS | Aug 5, 2024
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಮಸ್ಯೆಯು ಸೇರಿದಂತೆ ವಿವಿಧ ಕಾಮಗಾರಿ ವಿಳಂಬ ಆಗೋದಕ್ಕೆ ರಾಜ್ಯಸರ್ಕಾರ ಹಾಗೂ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರೇ ಕಾರಣ ಅಂತಾ ಸಂಸದ ಬಿವೈ ರಾಘವೇಂದ್ರ ದೂರಿದ್ದಾರೆ.
ಬಿವೈ ರಾಘವೇಂದ್ರ
ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿದ ಅವರು ಮಧು ಬಂಗಾರಪ್ಪ ರವರು ಬಿಜೆಪಿ ಹಗರಣ ಬಿಚ್ಚಿಡುವುದಾಗಿ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಬದಲಾಗಿ ಅವರು ಸಚಿವರಾಗಿ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದಾರೆ ಎಂದು ಹೇಳಲಿ ಅಂತಾ ಸವಾಲು ಹಾಕಿದರು.
ಶಿವಮೊಗ್ಗ ವಿಮಾನ ನಿಲ್ದಾಣ
ವಿಮಾನ ನಿಲ್ದಾಣ ಕಾಮಗಾರಿಗೆ ರಾಜ್ಯ ಸರ್ಕಾರ ಅನುದಾನ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ ಎಂದ ಬಿವೈ ರಾಘವೇಂದ್ರ ಅಭಿವೃದ್ದಿ ಸಚಿವರು ಕಾಳಜಿ ತೋರುತ್ತಿಲ್ಲ ಅಂತಾ ಟೀಕಿಸಿದ್ದಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಶಿವಮೊಗ್ಗ ಜಿಲ್ಲೆಗೆ ಆಯುರ್ವೇದ ವಿಶ್ವವಿದ್ಯಾಲಯ ಮಂಜೂರಾಗಿದೆ. ಅದಕ್ಕೆ ಅನುದಾನ ಬಿಡುಗಡೆ ಮಾಡಿಸಲು ಉಸ್ತುವಾರಿ ಸಚಿವರಿಂದ ಆಗಿಲ್ಲವೆಂದು ಟೀಕಿಸಿದ್ದಾರೆ
ಶಿಕ್ಷಣ ಇಲಾಖೆಯಲ್ಲಿರುವ ಟ್ರಾನ್ಸಫರ್ ದಂಧೆ
ಶಿಕ್ಷಣ ಕ್ಷೇತ್ರದಲ್ಲಿಯು ವರ್ಗಾವಣೆ ಜೋರಾಗಿದ್ದು ಡಿಡಿಪಿಐಗೆ ಬೇರೆ ರೇಟ್ ಮತ್ತು ಬಿಇಒಗಳಿಗೆ ಬೇರೆ ರೇಟ್ ನಿಕ್ಕಿ ಮಾಡಲಾಗಿದೆ ಎಂದು ಬಿವೈಆರ್ ಆರೋಪಿಸಿದ್ದಾರೆ.
ಈ ಸಲ ಲೋಕಸಭಾ ಚುನಾವಣೆಯಲ್ಲಿ ಸೊರಬ ವಿಧಾನಸಭೆ ಕ್ಷೇತ್ರದಿಂದ ನನಗೆ ಲೋಕಸಭೆ ಚುನಾವಣೆಯಲ್ಲಿ 18 ಸಾವಿರ ಮತಗಳು ಲೀಡ್ ಬಂದಿವೆ. ಇನ್ನಾದರೂ ಸಚಿವರು ಬುದ್ದಿ ಕಲಿಯಬೇಕು ಎಂದು ಸಲಹೆ ನೀಡಿದರು
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ