ತಾಳಿ, ಕಾಲುಂಗರ, ಒಡವೆಗಳನ್ನು ತೆಗೆದಿಟ್ಟು, ಉಟ್ಟಬಟ್ಟೆಯಲ್ಲಿ ಮನೆ ಬಿಟ್ಟು ಹೋದ ತಾಯಿ!

shikaripura police station case

ತಾಳಿ, ಕಾಲುಂಗರ, ಒಡವೆಗಳನ್ನು ತೆಗೆದಿಟ್ಟು,  ಉಟ್ಟಬಟ್ಟೆಯಲ್ಲಿ ಮನೆ ಬಿಟ್ಟು ಹೋದ ತಾಯಿ!
shikaripura police station case

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 12, 2025 ‌‌ ‌

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು, ಪೇಟೆಯಲ್ಲಿ ನಡೆದ ಘಟನೆಯೊಂದು ಮನಕಲುತ್ತಿದೆ. ಮನೆಯಲ್ಲಿ ನಡೆದ ಜಗಳಕ್ಕೆ ಬೇಸತ್ತು ತಾಯಿಯೊಬ್ಬರು ತಮ್ಮೆಲ್ಲ ಚಿನ್ನಾಭರಣ ಹಾಗೂ ತಾಳಿ, ಕಾಲುಂಗರವನ್ನು ಸಹ ಮನೆಯಲ್ಲಿ ಬಿಚ್ಚಿಟ್ಟು ಉಟ್ಟ ಬಟ್ಟೆಯಲ್ಲಿಯೇ ಮನೆ ಬಿಟ್ಟು ತೆರಳಿರುವ ಬಗ್ಗೆ ವರದಿಯಾಗಿದೆ. ಶಿಕಾರಿಪುರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. 

FIR ನಲ್ಲಿ ಉಲ್ಲೇಖಿಸಿರುವಂತೆ ಕಳೆದ ಏಳನೇ ತಾರೀಖು, ಮಹಿಳೆಯೊಬ್ಬರು ತಡರಾತ್ರಿ ಕಾಣೆಯಾಗಿದ್ದಾರೆ. ಕಾಣೆಯಾಗುವುದಕ್ಕೂ ಮೊದಲು ಮನೆಯಲ್ಲಿ ಜಗಳವಾಗಿತ್ತು. ಆನಂತರ ಮಕ್ಕಳು ಸಮಾಧಾನ ಮಾಡಿದ್ದರು. ಆದರೂ ತಾಯಿ ತಾನು ಧರಿಸಿದ್ದ ತಾಳಿ, ಕಾಲುಂಗುರ, ಕಿವಿಯ ಓಲೆ, ಬಂಗಾರದ ಒಡವೆಗಳನ್ನು ಬಿಚ್ಚಿ ತಾನು ಮಲಗಿದ್ದ ಕೋಣೆಯಲ್ಲಿಯೇ ಇಟ್ಟು, ಉಟ್ಟ ಬಟ್ಟೆಯಲ್ಲಿಯೇ ಎಲಿಗೋ ಹೋಗಿದ್ದಾರೆ. ಅವರಿಗಾಗಿ ಹುಡುಕಾಡಿದ ಮನೆಯವರು, ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.