ಚಿನ್ನದ ಅಂಗಡಿಗೆ ಕನ್ನ | ಎಲೆಕ್ಟ್ರಾನಿಕ್ಸ್ ಶಾಪ್ ನಲ್ಲಿ ಕ್ಯಾಶ್ ಕಳ್ಳತನ | ಒಂದೇ ರಾತ್ರಿಯಲ್ಲಿ 18 ಲಕ್ಷದ ಮಾಲು ಮಾಯ
series of thefts occurred in Arahatholalu, Holehonnur, where electronics and jewelry stores were targeted
SHIVAMOGGA | MALENADUTODAY NEWS | Jul 15, 2024
ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಬಸ್ ಸ್ಟ್ಯಾಂಡ್ ಕಳ್ಳಿಯರನ್ನ ಹಿಡಿದು ಸಾಧನೆ ಮಾಡಿರುವ ಬೆನ್ನಲ್ಲೆ ಅತ್ತ ಹೊಳೆ ಹೊನ್ನೂರು ಪೊಲೀಸ್ ಸ್ಟೇಷನ್ ಲಿಮಿಟ್‌ನಲ್ಲಿ ದೊಡ್ಡದೊಂದು ಕಳ್ಳತನ ಕೇಸ್ ನಡೆದಿದೆ.
ಹೊಳೆಹೊನ್ನೂರು ಸಮೀಪದ ಅರಹತೊಳಲು ಕೈಮರ ಸರ್ಕಲ್‌ನಲ್ಲಿ ಸರಣಿ ಕಳ್ಳತನ ನಡೆದಿದೆ. ಆನವೇರಿ ರಸ್ತೆಯಲ್ಲಿರುವ ಕಾಂಪ್ಲೆಕ್ಸ್‌ವೊಂದರಲ್ಲಿದ್ದ ಎಲೆಕ್ಟ್ರಾನಿಕ್ಸ್ ಹಾಗೂ ಜ್ಯುವೆಲರಿ ಮಳಿಗೆಗಳಲ್ಲಿ ಕಳ್ಳತನ ನಡೆದಿದೆ. ಇಲ್ಲಿನ ರೇಣುಕಾಂಬ ಎಲೆಕ್ಟ್ರಾನಿಕ್ಸ್ ಅಂಗಡಿಯ ಹಿಂಬದಿ ಗೇಟ್ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು, ಕ್ಯಾಷಿಯರ್ ಡ್ರಾನಲ್ಲಿದ್ದ ₹5 ಲಕ್ಷ ನಗದು ಎಗರಿಸಿದ್ದಾರೆ. ನಂತರ ಪಕ್ಕದಲ್ಲಿದ್ದ ಪ್ರಕಾಶ್ ಜ್ಯುವೆಲ್ಲರ್ಸ್ ಅಂಗಡಿಯ ರೋಲಿಂಗ್ ಶೆಟರ್ ಮುರಿದು ಅಂಗಡಿಗೆ ನುಗ್ಗಿದ್ದಾರೆ. ಚಿನ್ನ, ಬೆಳ್ಳಿಯ ವಸ್ತುಗಳು ಸೇರಿದಂತೆ ₹18 ಲಕ್ಷ ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಪ್ರಕರಣದ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.
A series of thefts occurred in Arahatholalu, Holehonnur, where electronics and jewelry stores were targeted.