ವಿದ್ಯಾರ್ಥಿ, ಪೋಷಕರು ಹಾಗೂ ಉಪನ್ಯಾಸಕರ ನಡುವಿನ ಫೈಟ್‌ | ಸಿಸಿ ಕ್ಯಾಮರಾದಲ್ಲಿ ಏನಿದೆ ಗೊತ್ತಾ

In a shocking incident, a youth was beaten up by a lecturer at the Government First Grade College in Sagar in Shimoga district in front of his parents who asked him why his son was not made to sit for the examination.

ವಿದ್ಯಾರ್ಥಿ, ಪೋಷಕರು ಹಾಗೂ ಉಪನ್ಯಾಸಕರ ನಡುವಿನ ಫೈಟ್‌ | ಸಿಸಿ ಕ್ಯಾಮರಾದಲ್ಲಿ ಏನಿದೆ ಗೊತ್ತಾ
Attendance shortage scuffle between student and teacher

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 24, 2024

ಸಾಗರ | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾಲೇಜೊಂದರಲ್ಲಿ ವಿದ್ಯಾರ್ಥಿ ಹಾಗೂ ಆತನ ಪೋಷಕರು ಮತ್ತು ಉಪನ್ಯಾಸಕರ ನಡುವೆ ನಡೆದಿರುವ ಹೊಡೆದಾಟದ ಸಂಬಂಧ ಇದೀಗ ಕಾಲೇಜಿನ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ಹೊರಬಿದ್ದಿವೆ. ಈ ಸಂಬಂಧ ಈಗಾಗಲೇ ದೂರು ಪ್ರತಿದೂರು ದಾಖಲಾಗಿದ್ದು ಸಾಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಉಪನ್ಯಾಸಕರ ಮೇಲಿನ ಹಲ್ಲೆಗೆ ಖಂಡನೆ ವ್ಯಕ್ತವಾಗುತ್ತಿದೆ. ಈ ಕುರಿತಾಗಿ ಉಪನ್ಯಾಸಕರ ವರ್ಗ ಹಲೆವೆಡೆ ಪ್ರತಿಭಟನೆಯನ್ನು ಸಹ ನಡೆದಿದೆ. 

ಇದರ ನಡುವೆ ಸಿಸಿ ಕ್ಯಾಮರಾದ ಪೂಟೇಜ್‌ ನಡೆದ ಘಟನೆಯನ್ನು ಯಥಾವತ್ತು ಕಣ್ಮುಂದೆ ಇಡುತ್ತಿದೆ. ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಇಂತಹದ್ದೊಂದು ಘಟನೆ ನಡೆಯಬಾರದಿತ್ತು. ವಿಡಿಯೋದಲ್ಲಿರುವಂತೆ ಉಪನ್ಯಾಸಕರು ಹಾಗೂ ಪೋಷಕರ ನಡುವೆ ಜೋರು ಮಾತಾಗುವ ಹೊತ್ತಿಗೆ ವಿದ್ಯಾರ್ಥಿಯು ಸಹ ಉಪನ್ಯಾಸಕರ ವಿರುದ್ಧ ಆಕ್ರೋಶ ಹೊರಹಾಕುತ್ತಾನೆ. ಆತ ಕೈ ತೋರಿಸಿ ಮಾತನಾಡಿದಾಗ ಉಪನ್ಯಾಸಕರು ಆತನಿಗೆ ಹೊಡೆಯಲು ಮುಂದಾಗುತ್ತಾರೆ, ಇದೇ ವೇಳೆ ಪೋಷಕರ ಉಪನ್ಯಾಸಕನ ಮೇಲೆ ಕೈ ಮಾಡಲು ಮುಂದಾಗುತ್ತಾರೆ. ಮುಂದಿನ ಚಿತ್ರಣದಲ್ಲಿ ಕೆಲವು ಸೆಕೆಂಡ್‌ಗಳ ಕಾಲ ಹೊಡೆದಾಟ ನಡೆಯುತ್ತದೆ. ಈ ವೇಳೆ ಅಲ್ಲಿದ್ದವರು ಎರಡು ಕಡೆಯವರನ್ನ ಸಮಾಧಾನ ಮಾಡಲು  ಪ್ರಯತ್ನಿಸುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿದೆ 

SUMMARY | In a shocking incident, a youth was beaten up by a lecturer at the Government First Grade College in Sagar in Shimoga district in front of his parents who asked him why his son was not made to sit for the examination.

KEYWORDS | Sagar, Shimoga,  examination, student, lecture,