KARNATAKA NEWS/ ONLINE / Malenadu today/ May 31, 2023 SHIVAMOGGA NEWS
ಶಿವಮೊಗ್ಗ/ (school opening in karnataka)ಇವತ್ತಿನಿಂದ ಎಲ್ಲೆಡೆ ಶಾಲೆಗಳು ಪುನಾರಂಭಗೊಂಡಿದೆ. ಪೋಷಕರ ಗಡಿಬಿಡಿ, ಮಕ್ಕಳ ಒಲ್ಲದ ಮನಸ್ಸು, ಟೀಚರ್ಸ್ಗಳ ಲವಲವಿಕೆ , ಜನಪ್ರತಿನಿಧಿಗಳ ಖುಷಿಯೊಂದಿಗೆ ಶಾಲೆಗಳು ಜಿಲ್ಲೆಯಲ್ಲಿ ಆರಂಭಗೊಂಡವು. ಜಿಲ್ಲೆಯಲ್ಲಿ ವಿಶೇಷವಾಗಿ ಈ ಸಲ ಹೊಸ ಹೊಸ ಜನಪ್ರತಿನಿಧಿಗಳೊಂದಿಗೆ ಶಾಲೆಗಳು ಸಂಭ್ರಮದಿಂದ ಮಕ್ಕಳನ್ನ ಬರಮಾಡಿಕೊಂಡವು. ಜಿಲ್ಲೆಯಲ್ಲಿ ಕಂಡುಬಂದ ದೃಶ್ಯಗಳನ್ನು ನೋಡುತ್ತಾ ಹೋಗುವುದಾದರೆ,
ಸದ್ಯ ಸರ್ಕಾರಿ ಶಾಲೆಗಳಲ್ಲಿಯೇ ಜಿಲ್ಲೆಯಲ್ಲಿ ಅಗ್ರಸ್ಥಾನದಲ್ಲಿರುವ ದುರ್ಗಿಗುಡಿ ಸರ್ಕಾರಿ ಪ್ರೌಡ ಶಾಲೆ, ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಯ ಆರಂಭೋತ್ಸವ ಕಾರ್ಯಕ್ರಮ ವಿಶೇಷವಾಗಿತ್ತು. ಸಿಹಿ ಮತ್ತು ಗುಲಾಬಿ ಹೂವು ನೀಡಿ ಮಕ್ಕಳನ್ನ ಟೀಚರ್ಸ್ಗಳು ಬರಮಾಡಿಕೊಂಡರು. ಇದೇ ವೇಳೇ ಪಾಲಿಕೆ ಸದಸ್ಯ ಹೆಚ್.ಎಸ್.ಯೊಗೀಶ್, ಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಹಂಚಿ ಖುಷಿ ಪಟ್ಟರು. karnataka school opening date
ಅತ್ತ ಶೈಕ್ಷಣಿಕ ವರ್ಷ ಆರಂಭ ಹಿನ್ನೆಲೆಯಲ್ಲಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಸಿಹಿ ನೀಡಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಮಕ್ಕಳನ್ನ ಸ್ವಾಗತಿಸಿದರು. ಹೊಸಮನೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಉತ್ತಮ ರೀತಿಯಲ್ಲಿ ಶಿಕ್ಷಣ ಕಲಿತು ಈ ರಾಜ್ಯಕ್ಕೆ ಕೀರ್ತಿಯನ್ನು ತರಬೇಕೆಂದು ಮಕ್ಕಳಿಗೆ ಸಲಹೆ ನೀಡಿದ್ರು.
ಇನ್ನೂ ಶಿವಮೊಗ್ಗ ನಗರದ ಶಾಸಕ ಚನ್ನಬಸಪ್ಪರವರು ಸಹ ಗಾಡಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟು ಮಕ್ಕಳೊಂದಿಗೆ ಬೆರತು ಶಾಲೆ ಆರಂಭದ ಸಿಹಿ ಹಂಚಿಕೊಂಡರು. ಈ ವೇಳೆ ಮಕ್ಕಳಿಗೆ ಕುಂಕುಮವಿಟ್ಟು ಆರತಿ ಎತ್ತಿ ಶಾಲೆಗೆ ಬರಮಾಡಿಕೊಳ್ಳಲಾಯ್ತು. ಹಬ್ಬದ ರೀತಿಯಲ್ಲಿ ಬಲೂನ್ಗಳನ್ನ ಕಟ್ಟಿ, ತಳಿರು ತೋರಣದೊಂದಿಗೆ ಶಾಲೆಯನ್ನು ಸಿಂಗಾರ ಮಾಡಲಾಗಿತ್ತು.
ವಡ್ಡಿನಕೊಪ್ಪದಲ್ಲಿ ಅಪ್ಪಟ ಮಲೆನಾಡಿನ ಸ್ಟೈಲ್ನಲ್ಲಿ ಸರ್ಕಾರಿ ಶಾಲೆಯನ್ನು ಸಿಂಗಾರಗೊಳಿಸಲಾಗಿತ್ತು. ಹಸೆ ಚಿತ್ತಾರದೊಂದಿಗೆ ವಡ್ಡಿನಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಎಂಬ ಬೋರ್ಡ್ ಮನಸೂರೆ ಗೊಳ್ಳುತ್ತಿದ್ದರೇ, ಟಿಪ್ ಟಾಪ್ ಆಗಿ ಮಾಸ್ಕ್ ಸಮೇತ ಬರುತ್ತಿದ್ದ ಮಕ್ಕಳು, ಭವಿಷ್ಯದ ಸಾಧಕರಂತೆ ಕಾಣುತ್ತಿದ್ದರು.
ಹೆಣ್ಣುಮಕ್ಕಳು ಶಾಲೆ ಬಳಿಯಲ್ಲಿ ರಂಗೋಲಿ ಬಿಡಿಸಿದರೆ, ಗಂಡು ಮಕ್ಕಳು ತಳಿರು ತೋರಣ ಕಟ್ಟಿ ತಮ್ಮ ಶಾಲೆ ತಮ್ಮ ಹೆಮ್ಮೆ ಎಂದು ಸಂಭ್ರಮಿಸಿದರು.
ತೀರ್ಥಹಳ್ಳಿಯ ಗುಡ್ಡೆಕೊಪ್ಪದಲ್ಲಿ ಸರ್ಕಾರಿ ಶಾಲೆಗೆ ಮಾಜಿ ಸಚಿವರು, ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ ಭೇಟಿ ನೀಡಿ ಮಕ್ಕಳಿಗೆ ಹೂಗುಚ್ಚ ನೀಡುವುದರ ಮೂಲಕ ಅವರನ್ನು ಸ್ವಾಗತಿಸಿ ಸಿಹಿ ವಿತರಣೆ ಮಾಡಿ ಮಕ್ಕಳ ಕಲಿಕೆಗೆ ಶುಭ ಹಾರೈಸಿದರು.
ಇನ್ನೂ ಶಾಸಕರಾದ ಗೋಪಾಲಕೃಷ್ಣ ಬೇಳೂರುರವರು ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಂದು ಕೊರತೆಯನ್ನು ಆಲಿಸಿದ್ದಾರೆ. ಅಲ್ಲದೆ ಬೆಳಲಮಕ್ಕಿಯಲ್ಲಿ ನಡೆದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ” ಶಾಲಾ ಪ್ರಾರಂಭೋತ್ಸವ ” ಕಾರ್ಯಕ್ರಮಕ್ಕೆ ಭೇಟಿ ನೀಡಿ ವಿಧ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿದರು. ಸಮವಸ್ತ್ರಗಳನ್ನು ವಿತರಿಸಿದರು
