Sagara Town | ಚಿತ್ರದುರ್ಗದ ಹಿರಿಯೂರು ವ್ಯಕ್ತಿ ಸೇರಿ ಸಾಗರದಲ್ಲಿ ಮೂವರು ಮಿಸ್ಸಿಂಗ್ | ಸುಳಿವು ಸಿಕ್ಕರೇ ತಿಳಿಸಿ
Sagara Town | Three missing in sagar, including a man from Hiriyur in Chitradurga Hiriyur in Chitradurga ,Sagara Town , ಹಿರಿಯೂರು, ಸಾಗರ, ಚಿತ್ರದುರ್ಗ, ಕಾಣೆಯಾದವರ ಕುರಿತು ಪ್ರಕಟಣೆ
SHIVAMOGGA | MALENADUTODAY NEWS | Aug 6, 2024
ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದವರ ಕುರಿತು ಪ್ರಕರಣ ದಾಖಲಾಗಿರುವ ಕೆಳಕಂಡವರ ವಿವರಗಳನ್ನು ಮರುಪ್ರಕಟಣೆಗಾಗಿ ಪೊಲೀಸ್ ಇಲಾಖೆಯಿಂದ ಪ್ರಕಟಣೆ ನೀಡಲಾಗಿದೆ.
ಕಾಣೆಯಾದವರ ಕುರಿತು ಪ್ರಕಟಣೆ
ಸಾಗರದ ಜೆಪಿನಗರ ವಾಸಿ ಮಂಜುನಾಥ ಬಿನ್ ಗಂಗಪ್ಪ ಎಂಬ 71 ವರ್ಷದ ವ್ಯಕ್ತಿ ಜನವರಿ 2023 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಮ್ಯಾಕ್ಲೂರು ಗ್ರಾಮ ವಾಸಿ ಶಿವಣ್ಣ ಬಿನ್ ಈರಣ್ಣ ಎಂಬ 28 ವರ್ಷ ಯುವಕ ಮಾರ್ಚ್-2023 ರಂದು ಸಾಗರದ ಕಾರ್ತಿಕ್ ಲಾಡ್ಜ್ನಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಸಾಗರದ ಕೆಳದಿ ರಸ್ತೆ ಶ್ರೀಗಂಧದ ಸಂಕೀರ್ಣದಲ್ಲಿ ಕೆತ್ತನೆ ಕೆಲಸ ಮಾಡುತ್ತಿದ್ದ ಬೆನಕೇಶ್ ಬಿನ್ ಚೆನ್ನಪ್ಪ ವೈ ಎಂಬ 25 ವರ್ಷ ಯುವಕ ಜೂನ್-2023 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಈ ಕಾಣೆಯಾದ ವ್ಯಕ್ತಿಗಳ ಮಾಹಿತಿ ದೊರಕಿದ್ದಲ್ಲಿ ಸಾಗರ ಪೊಲೀಸ್ ಠಾಣೆ-08183-226067, ಸಾಗರ ಡಿವೈಎಸ್‌ಪಿ ಕಚೇರಿ-08183-226082, ಎಸ್‌ಪಿ. ಕಚೇರಿ, ಶಿವಮೊಗ್ಗ – 08182-262400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. (ಛಾಯಾಚಿತ್ರ ಲಗತ್ತಿಸಿದೆ)