sagara town news : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಸಾಗರ ಪೇಟೆಯಲ್ಲಿ ಸ್ಕೂಟಿಯಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಕತ್ತಿಗೆ ಕೈ ಹಾಕಿ ಅವರ ಮಾಂಗಲ್ಯ ಸರವನ್ನು ಕದ್ದೊಯ್ದಿದ್ಧಾರೆ. ಇಲ್ಲಿನ ಇಕ್ಕೇರಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಸಾಗರ ಪೇಟೆ ಪೊಲೀಸರು ಕೇಸ್ ಮಾಡಿದ್ದಾರೆ.
sagara town news | ಮಾಂಗಲ್ಯ ಸರ ಅಪಹರಣ
ಸಾಗರ ಪಟ್ಟಣದ ಇಕ್ಕೇರಿ ರಸ್ತೆಯಲ್ಲಿ ಕಳೆದ ಬುಧವಾರ ಈ ಘಟನೆ ನಡೆದಿದೆ. ಇಲ್ಲಿನ ರಸ್ತೆಯಲ್ಲಿ ಸ್ಕೂಟಿಯಲ್ಲಿ ಬಂದ ಇಬ್ಬರು ಅದೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕದ್ದೊಯ್ದಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ 60 ವರ್ಷದ ಸೀತಮ್ಮ ಎಂಬವರ ಮಾಂಗಲ್ಯ ಕಳ್ಳತನವಾಗಿದೆ. ಸುಮಾರು 28 ಗ್ರಾಂ ತೂಕದ ಮಾಂಗಲ್ಯ ಸರ ಕಳುವಾಗಿದ್ದು, ಘಟನೆ ಬಳಿಕ ಸ್ಥಳೀಯರ ಸಹಾಯದಿಂದ ಮಹಿಳೆಯು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
sagara town news / ಸಾಗರ ಟೌನ್ ಪೊಲೀಸ್ ಠಾಣೆ
ಈ ಕುರಿತಾಗಿ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿರುವ ಪೊಲೀಸರು, ಪ್ರಕರಣದ ವಿಚಾರಣೆಯನ್ನು ಸಹ ಆರಂಭಿಸಿದ್ಧಾರೆ.