ಸಾಗರ ಪೇಟೆಯಲ್ಲಿ ನಡೆದಿದ್ದ ಬೈಕ್‌ & ಕಾರ್‌ ಡಿಕ್ಕಿಯ ವಿಡಿಯೋ! ಎದೆ ಝಲ್‌ ಅನ್ಸುತ್ತೆ

sagara town bike and car collide scene record in cctv camera

ಸಾಗರ ಪೇಟೆಯಲ್ಲಿ ನಡೆದಿದ್ದ ಬೈಕ್‌ & ಕಾರ್‌ ಡಿಕ್ಕಿಯ ವಿಡಿಯೋ! ಎದೆ ಝಲ್‌ ಅನ್ಸುತ್ತೆ
sagara town bike and car collide scene record in cctv camera

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 12, 2025 ‌‌ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಟೌನ್‌ನಲ್ಲಿ ಕಳೆದ ಭಾನುವಾರ ಸಂಭವಿಸಿದ್ದ ಬೈಕ್‌ ಅಪಘಾತದ ಸಿಸಿ ಕ್ಯಾಮರಾ ದೃಶ್ಯ ಮಲೆನಾಡು ಟುಡೆಗೆ ಲಭ್ಯವಾಗಿದೆ. 

ಸಾಗರ ಟೌನ್‌  

ಶಿವಮೊಗ್ಗ ಜಿಲ್ಲೆಯ ಸಾಗರದ ಬಿಹೆಚ್ ರಸ್ತೆಯ ಹೀರೋ ಹೊಂಡಾ ಶೋ ರೂಂ ಸಮೀಪದಲ್ಲಿ ಸಂಭವಿಸಿದ್ದ ಘಟನೆಯಲ್ಲಿ ರಸ್ತೆದಾಟುತ್ತಿದ್ದ  ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಆಗಿತ್ತು. ಪರಿಣಾಮ ಬೈಕ್‌ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು.ಈ ಕುರಿತಾಗಿ ಸಾಗರ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಈ ಘಟನೆಯು ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಬೈಕ್‌ ಸವಾರ ಮೇನ್‌ ರೋಡ್‌ ಕ್ರಾಸ್‌ ಮಾಡುವಾಗ, ಮುಖ್ಯರಸ್ತೆಯಲ್ಲಿ ಸ್ಪೀಡಾಗಿ ಬರುತ್ತಿದ್ದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಕೊನೆಕ್ಷಣದಲ್ಲಿ ಬೈಕ್‌ ಕಾರಿಗೆ ಡಿಕ್ಕಿಯಾಗುವುದನ್ನು ಬೈಕ್‌ ಸವಾರ ತಪ್ಪಿಸಲು ಪ್ರಯತ್ನಿಸುತ್ತಿದ್ದ ದೃಶ್ಯವೂ ಸೆರೆಯಾಗಿದೆ. ಇನ್ನೂ ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಸಹ ಮೇಲಕ್ಕೆ ಹಾರಿ ಕಾರಿನ ಮೇಲೆಯೇ ಬಿದ್ದಿದ್ದಾರೆ. ಅವರನ್ನ ತಳ್ಳಿಕೊಂಡು ಕಾರು ಮುಂದಕ್ಕೆ ಹೋಗಿ ನಿಂತಿದೆ.

 

SUMMARY  | sagara town bike and car collide scene record in cctv camera