ಸಾಗರ AC ಆಸ್ಪತ್ರೆಗೆ ₹300 ಕೋಟಿ | ಸಾಗರ ಟೌನ್‌ನಲ್ಲಿ ಪ್ರಕ್ಲಾಮೇಷನ್ ಆರೋಪಿ ಅರೆಸ್ಟ್| ಆನಂದಪುರದಲ್ಲಿ ಬೆಂಕಿ, ಮನೆ ಬೂದಿ
sagara taluk news, beluru gopala krishna , anandhapura ,

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 18, 2025
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸುತ್ತಮುತ್ತ ನಡೆದ ಘಟನೆಗಳಿಗೆ ಸಂಬಂಧಿಸಿದ ಮಲೆನಾಡು ಟುಡೆಯ ಇವತ್ತಿನ ವರದಿ ಇಲ್ಲಿದೆ
ಸುದ್ದಿ 1 | ಕೋರ್ಟ್‌ಗೆ ಬೇಕಿದ್ದ ಆರೋಪಿಯನ್ನ ಹಿಡಿದ ಪೊಲೀಸರು
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ PCJ & JMFC ನ್ಯಾಯಾಲಯ ಪ್ರಕ್ಲಾಮೇಷನ್ ಹೊರಡಿಸಿದ್ದ ವ್ಯಕ್ತಿಯನ್ನು ಸಾಗರ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಸಾಗರ ಟೌನ್ ಪೊಲೀಸರು 2020 ರಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಸೂಚನೆ ಮೇರೆಗೆ ಆರೋಪಿಯನ್ನು ಬಂಧಿಸಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರ್ ಪಡಿಸಿದ್ದು, ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ
ಸುದ್ದಿ 2 | ಮನೆಗೆ ಬೆಂಕಿ
ಸಾಗರ ತಾಲ್ಲೂಕು ಆನಂದಪುರದ ಸಮೀಪದ ಗೌತಮಪುರದಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದ ಘಟನೆ ನಡೆದಿದೆ. ಕಳೆದ ಭಾನುವಾರ ಘಟನೆ ನಡೆದಿದ್ದು, ಬೆಂಕಿಯಿಂದ ಸಾಕಷ್ಟು ನಷ್ಟ ಸಂಭವಿಸಿದೆ. ಮನೆಯಲ್ಲಿದ್ದ ಬಟ್ಟೆ, ಪಾತ್ರೆ, ಹೊಲಿಗೆ ಯಂತ್ರ ಸೇರಿದಂತೆ ಅನೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಇನ್ನೂ ವಿಷಯತಿಳಿದು ಸ್ಥಳಕ್ಕೆ ಬಂದ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ ನೀಡಿ ಆಕಸ್ಮಿಕ ಬೆಂಕಿಯಿಂದ ಮನೆ ಕಳೆದುಕೊಂಡ ಕುಟುಂಬದವರಿಗೆ ಧನ ಸಹಾಯ ಮಾಡಿದ್ಧಾರೆ
ಸುದ್ದಿ 3 | ಸಾಗರ ಆಸ್ಪತ್ರೆ ಹೈಟೆಕ್‌ಗೆ 300 ಕೋಟಿ
ಸಾಗರದ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯನ್ನು 300 ಕೋಟಿರೂಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಮಂಜೂರಾತಿ ದೊರೆತಿದೆ ಎಂದು ಶಾಸಕ ಗೋಪಾಲ ಕೃಷ್ಣಬೇಳೂರು ತಿಳಿಸಿದ್ದಾರೆ. ಈ ಸಂಬಂಧ ನಿನ್ನೆ ದಿನ ಮಾತನಾಡಿರುವ ಅವರು 100 ಹಾಸಿಗೆಯ ಆಸ್ಪತ್ರೆಯನ್ನು 250 ಹಾಸಿಗೆಯ ಆಸ್ಪತ್ರೆ ಯನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.ಆಸ್ಪತ್ರೆಯ ಹಿಂದೆ ಅಥವಾ ಆಸ್ಪತ್ರೆಯ ಎರಡು ಬದಿಗಳಲ್ಲಿ ನೂತನ ಕಟ್ಟಡ ನಿರ್ಮಿಸುವ ಯೋಜನೆ ಇದೆ ಎಂದರು.
SUMMARY | sagara taluk news, beluru gopala krishna , anandhapura ,
KEY WORDS | sagara taluk news, beluru gopala krishna , anandhapura ,