ಗಣಪತಿ ಹಬ್ಬಕ್ಕೆ ತವರು ಮನೆಗೆ ಬಂದಿದ್ದ ಯುವತಿ ಆತ್ಮಹತ್ಯೆ

prathapa thirthahalli
Prathapa thirthahalli - content producer

Sagara news  ಗಣಪತಿ ಹಬ್ಬಕ್ಕೆ ತವರು ಮನೆಗೆ ಬಂದಿದ್ದ ಯುವತಿ ಆತ್ಮಹತ್ಯೆ

ಸಾಗರ: ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿ ಗ್ರಾಮದಲ್ಲಿ 28 ವರ್ಷದ ರಂಜಿತಾ ಎಂಬ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಣಪತಿ ಹಬ್ಬಕ್ಕೆಂದು ತವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ರಂಜಿತಾ ಅವರು ಈ ಹಿಂದೆ ವಿಚ್ಛೇದನ ಪಡೆದು ಎರಡನೇ ಮದುವೆಯಾಗಿದ್ದರು. ವೈಯಕ್ತಿಕ ಜೀವನದದಿಂದ ಮನನೊಂದಿದ್ದ ಯುವತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಜಗುಲಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕುಟುಂಬದ ಸದಸ್ಯರು ನೀಡಿದ ದೂರಿನಲ್ಲಿ, ರಂಜಿತಾ ಅವರು ವೈಯಕ್ತಿಕ ಸಮಸ್ಯೆಗಳಿಂದ ತೀವ್ರವಾಗಿ ನೊಂದಿದ್ದರು ಮತ್ತು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sagara news
Sagara news

Share This Article