ನಗರಸಭೆ ಅಧ್ಯಕ್ಷ & ಉಪಾಧ್ಯಕ್ಷ ಎಲೆಕ್ಷನ್ | ಸಾಗರ ಪೇಟೆಯಲ್ಲಿ ಮೂಡಿಸ್ತಿದೆ GKB ಸೈಲೆಂಟ್ ಪ್ಲಾನ್?
sagara municipal president vice president election

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 23, 2025
ಭದ್ರಾವತಿ ಬಳಿಕ ಇದೀಗ ಸಾಗರ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಆಯ್ಕೆ ಕಸರತ್ತು ಕುತೂಹಲ ಮೂಡಿಸಿದೆ. ಕೋರ್ಟ್ ವಿಚಾರವಾಗಿ ಮುಂದಕ್ಕೆ ಹೋಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಇದೇ ಫೆಬ್ರವರಿ 25 ರಂದು ನಡೆಯಲಿದೆ. ಈ ನಡುವೆ ನಗರಸಭೆಯನ್ನು ತಮ್ಮ ವಶಕ್ಕೆ ಪಡೆಯಲು ಆಪರೇಷನ್ ಹಸ್ತ ಆರಂಭವಾಗಿದೆ ಎಂಬ ಚರ್ಚೆ ಸಾಗರ ಪೇಟೆ ತುಂಬಾ ನಡೆಯುತ್ತಿದೆ.
ಸಾಗರ ನಗರಸಭೆಯಲ್ಲಿ ಬಿಜೆಪಿ 16 ಸದ್ಯಸ್ಯರಿದ್ದಾರೆ. ಇತ್ತ ಕಾಂಗ್ರೆಸ್ ಹಾಗೂ ಪಕ್ಷೇತರರು 14 ಮಂದಿ ಇದ್ದಾರೆ. ಶಾಸಕ ಹಾಗೂ ಸಂಸದರ ಮತಗಳು ಎರಡು ಇವೆ. ಈಗಾಗಲೇ ಬಹುಮತ ಇಲ್ಲದಿದ್ದರೂ, ಹೊಸನಗರ ಪಟ್ಟಣ ಪಂಚಾಯಿತಿ, ಕಾರ್ಗಲ್ ಹಾಗೂ ಜೋಗ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಧಿಕಾರ ಕೊಡಿಸುವಲ್ಲಿ ಬೇಳೂರು ಗೋಪಾಲಕೃಷ್ಣರು ಸಕ್ಸಸ್ ಆಗಿದ್ದಾರೆ. ಇದೀಗ ಅವರ ಕಣ್ಣು ಸಾಗರ ನಗರಸಭೆ ಮೇಲೆ ಬಿದ್ದಿದೆ ಎಂಬುದು ಚರ್ಚೆ
ಲೆಕ್ಕಾಚಾರವೇನು?
ಬಿಜೆಪಿಯ ಸದಸ್ಯರ ಪೈಕಿ ಚುನಾವಣೆಯ ಸಂದರ್ಭದಲ್ಲಿ ನಾಲ್ಕೈದು ಮಂದಿಯನ್ನು ಗೈರಾಗುವ ಹಾಗೆ ನೋಡಿಕೊಂಡು, ಪಕ್ಷೇತರರ ಮತಗಳನ್ನು ಒಗ್ಗೂಡಿಸಿಕೊಂಡು ಕಾಂಗ್ರೆಸ್ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದು ಶಾಸಕರ ಪಡೆಯ ಯೋಜನೆ ಎನ್ನಲಾಗಿದೆ. ಇದು ಯಾವ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದು ಇದಕ್ಕೆ ಫೆಬ್ರವರಿ 25 ಕ್ಕೆ ಉತ್ತರ ಸಿಗಲಿದೆ.
SUMMARY | sagara municipal president vice president election
KEY WORDS | sagara municipal president vice president election