Sagara | ಭಟ್ಕಳದಿಂದ ಬೆಂಗಳೂರಿಗೆ ಹೋಗುತ್ತಿದ್ದ Ksrtc ಬಸ್‌ನಲ್ಲಿ ಬೆಂಕಿ | ಜೋಗ ರಸ್ತೆಯಲ್ಲಿ ಘಟನೆ
Sagara | Fireiii breaks out in KSRTC bus on its way to Bengaluru from Bhatkal | The incident took place on Joga Road.
SHIVAMOGGA | MALENADUTODAY NEWS | Aug 6, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಜೋಗ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ವೊಂದಕ್ಕೆ ಬೆಂಕಿ ತಗುಲಿ ಬಸ್ ಸುಟ್ಟು ಕರಕಲಾದ ಘಟನೆ ಸಂಭವಿಸಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಘಟನೆಯಲ್ಲಿ ಬಸ್ ಬಹುತೇಕ ಸುಟ್ಟು ಹೋಗಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬಸ್ ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ.
ಭಟ್ಕಳ ಟು ಬೆಂಗಳೂರು
ಭಟ್ಕಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಸಾಗರ ತಾಲ್ಲೂಕಿನ ಜೋಗ ರಸ್ತೆ ಬಳಿ ಸಿಗುವ ಕೆಎಸ್‌ಆರ್‌ಟಿಸಿ ಡಿಪೋ ಬಳಿ ಬರುತ್ತಿತ್ತು. ಈ ವೇಳೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬಸ್‌ನಲ್ಲಿ 12 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಇನ್ನೂ ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸ್ಥಳದಲ್ಲಿದ್ದಾರೆ.