ನಗರದ ಕ್ರಾಸಿಂಗ್ ಗೇಟ್‌ಗಳಲ್ಲಿ ಶಿವಮೊಗ್ಗ ರೈಲ್ವೆ ಅಧಿಕಾರಿಗಳ ಕಾರ್ಯಾಚರಣೆ | ಸವಾರರಿಗೆ ಸಲಹೆ
Shivamogga railway staff , safety drive and awareness campaign, Railway Level Crossing Gate ,Shivamogga Town ,SMET, Shivamogga ,SME, Railway stations

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 23, 2025
ರೈಲ್ವೆ ಗೇಟ್‌ಗಳಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಂಡರೂ ಸಹ ಕೆಲವು ಸವಾರರು ಪರಿಮಿತಿಗಳನ್ನು ಮೀರಿ ಅಪಾಯಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸರು ಸುರಕ್ಷತಾ ಅಭಿಯಾನವನ್ನು ಕೈಗೊಂಡಿದ್ದಾರೆ.
ಈ ನಿಟ್ಟಿನಲ್ಲಿ ನಿನ್ನೆ ದಿನ SI/RPF/SMET ಅನ್ವರ್ ಸಿದ್ದಿಕಿ ,Senior Section Engineer/Permanent Way/Shivamogga ಪ್ರಭಾಕರ್ ಹಾಗೂ Traffic Inspector/Shivamogga ಜಗದೀಶ್ ರವರ ನೇತೃತ್ವದಲ್ಲಿ ಶಿವಮೊಗ್ಗದ ರೈಲ್ವೆ ಗೇಟ್‌ಗಳಲ್ಲಿ ಸುರಕ್ಷತಾ ಅಭಿಯಾನವನ್ನು ಕೈಗೊಂಡರು.
ರೈಲ್ವೆ ಗೇಟ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ ಅಧಿಕಾರಿಗಳು ರೈಲ್ವೆ ಗೇಟ್ ಕ್ಲೋಸ್ ಆಗಿದ್ದಾಗ ವಾಹನ ಸವಾರರು ವಹಿಸಬೇಕಾದ ತಾಳ್ಮೆ ಹಾಗೂ ಸುರಕ್ಷತೆಯ ಕಾಳಜಿ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಶಿವಮೊಗ್ಗ ನಗರ ಹಾಗೂ ಶಿವಮೊಗ್ಗ ಟೌನ್ ಸ್ಟೇಷನ್ ನಡುವಿನ ರೈಲ್ವೆ ಗೇಟ್‌ಗಳಲ್ಲಿ ವಾಹನ ಸವಾರರಲ್ಲಿ ರೈಲ್ವೆ ಲೆವಲ್ ಕ್ರಾಸಿಂಗ್ ವೇಳೆ ಜಾಗ್ರತೆ ವಹಿಸುವಂತೆ ಮನವಿ ಮಾಡಿದರು.
SUMMARY | Shivamogga railway staff conducted safety drive and awareness campaign at Railway Level Crossing Gate ,Shivamogga Town (SMET) and Shivamogga (SME) Railway stations.
KEY WORDS | Shivamogga railway staff , safety drive and awareness campaign, Railway Level Crossing Gate ,Shivamogga Town ,SMET, Shivamogga ,SME, Railway stations