Bitcoin Fraud‌ | ಕಣ್ಣಿಗೆ ಕಾಣದ ಕಾಯಿನ್‌ಗಾಗಿ ಕಳೆದುಕೊಂಡಿದ್ದು 28 ಲಕ್ಷ ರೂಪಾಯಿ | ಡಾಕ್ಟರ್‌ಗೆ ವಂಚನೆ

Rs 28 lakh lost for Bitcoin | Cheating on doctor Bitcoin Fraud

Bitcoin Fraud‌ | ಕಣ್ಣಿಗೆ ಕಾಣದ ಕಾಯಿನ್‌ಗಾಗಿ ಕಳೆದುಕೊಂಡಿದ್ದು 28 ಲಕ್ಷ ರೂಪಾಯಿ | ಡಾಕ್ಟರ್‌ಗೆ ವಂಚನೆ
Bitcoin Fraud

SHIVAMOGGA | MALENADUTODAY NEWS |  Jul 26, 2024

ಶಿವಮೊಗ್ಗ ದಲ್ಲಿನ ವೈದ್ಯೆ ಒಬ್ಬರಿಗೆ ಡಿಜಿಟಲ್‌ ಕಾಯಿನ್‌ ಹೆಸರಲ್ಲಿ ವಂಚನೆ ಮಾಡಲಾಗಿದ್ದು ಈ ಸಂಬಂಧ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

 

ಲಿಂಗನಮಕ್ಕಿ ಜಲಾಶಯ 1800 ಅಡಿ ತಲುಪಲು ಇನ್ನೊಂದೆ ಅಡಿ ಬಾಕಿ

ಇದೊಂದು ಆನ್‌ಲೈನ್‌ ಬಿಟ್‌ ಕಾಯಿನ್‌ (Bit Coin)  ಆಗಿದ್ದು ಇದರ ಮೇಲೆ ಹೂಡಿಕೆ ಮಾಡಿದರೆ ಸಿಕ್ಕಾಪಟ್ಟೆ ಲಾಭ ಮಾಡಬಹುದು ಎಂದು ಹೇಳಿ ವೈದ್ಯೆಯೊಬ್ಬರನ್ನ ವಂಚಿಸಲಾಗಿದೆ. ಇದರಿಂದ ಅವರು 28 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಏನಿದು ಪ್ರಕರಣ 

ವೈದ್ಯೆಯೊಬ್ಬರು ತಮ್ಮ ಪರಿಚಿತ ವ್ಯಕ್ತಿಯ ಮೂಲಕ ಡಿಜಿಟಲ್‌ ಕಾಯಿನ್‌ ಮೇಲೆ ಹೂಡಿಕೆಯ ವಿಚಾರ ತಿಳಿದುಕೊಂಡಿದ್ದರು. ಪರಿಚಿತ ವ್ಯಕ್ತಿಯು ಇನ್ನೊಬ್ಬನ ಜೊತೆಗೆ ಬಂದು  ಕಾಯಿನ್‌ ಒಂದಕ್ಕೆ 10 ಸಾವಿರ ರೂಪಾಯಿ ಹಾಕಿದರೆ ದೊಡ್ಡ ಮಟ್ಟದ ಲಾಭ ಬರುತ್ತೆ ಎಂದು ವಿಶ್ವಾಸ ಮೂಡಿಸಿದ್ದ. ಇದನ್ನ ನಂಬಿ  ಅವರು 28 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಆ ಬಳಿಕ ಇಬ್ಬರು ವ್ಯಕ್ತಿಗಳು ಇಲ್ಲ ಸಲ್ಲದ ಕಾರಣಗಳನ್ನ ಹೇಳಿದ್ದಾರೆ. ಹೀಗೆ ಎರಡು ವರ್ಷ ಕಳೆದಿದೆ. ಇದೀಗ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.