ಮುಂಬೈ ಅಭಿಮಾನಿಗಳಿಗೆ ರೋಹಿತ್‌ನೇ ಬಾಹುಬಲಿ! ಪಾಂಡ್ಯನಲ್ಲ! ರಾಂಗ್‌ ಆಯ್ತು ಹಾರ್ದಿಕ್‌ ಆ್ಯಟಿಟೂಡ್ ಮತ್ತು ಎಐ ವಿಡಿಯೋ

Rohit is Baahubali for Mumbai fans! Not Pandya! Hardik's attitude and AI video goes viral

ಮುಂಬೈ ಅಭಿಮಾನಿಗಳಿಗೆ ರೋಹಿತ್‌ನೇ ಬಾಹುಬಲಿ! ಪಾಂಡ್ಯನಲ್ಲ!  ರಾಂಗ್‌ ಆಯ್ತು ಹಾರ್ದಿಕ್‌ ಆ್ಯಟಿಟೂಡ್ ಮತ್ತು ಎಐ ವಿಡಿಯೋ
Rohit is Baahubali ,Mumbai fans,Hardik, IPL2024

shivamogga Mar 25, 2024  ಚುನಾವಣೆ ಜೊತೆಜೊತೆ ಐಪಿಎಲ್‌ ಸೀಸನ್‌ #IPL2024 ಕೂಡ ಆರಂಭವಾಗಿದೆ. ಆರಂಭಿಕ ಹಂತದಲ್ಲಿಯೇ ಮ್ಯಾಚ್‌ಗಳು ಅಚ್ಚರಿ ಮೂಡಿಸುತ್ತಿದ್ದು, ಇವುಗಳ ಜೊತೆ ಎಮೋಷನ್ಸ್‌ಗಳು ವೈರಲ್‌ ಹಾಗೂ ಟ್ರೋಲ್‌ ಆಗುತ್ತಿವೆ. ಅದರಲ್ಲಿಯು ವಿಶೇಷವಾಗಿ ಮುಂಬೈ ಇಂಡಿಯನ್ಸ್‌ ಅಭಿಮಾನಿಗಳು ತಮ್ಮ ಇಷ್ಟದ ಆಟಗಾರ ರೋಹಿತ್‌ ಶರ್ಮಾರ ಪರವಾಗಿ ನಿಂತಿದ್ದು ಟೀಂನ ವಿರುದ್ಧವೇ ಸಖತ್‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಇದಕ್ಕೆ ಕಾರಣವಾಗಿರುವುದು ಗುಜರಾತ್‌ನಿಂದ ಹಾರ್ದಿಕ್‌ ಪಾಂಡ್ಯನನ್ನ ಕರೆದುಕೊಂಡು ಬಂದು ಮುಂಬೈ ಇಂಡಿಯನ್ಸ್‌ ತಂಡದ ಕ್ಯಾಪ್ಟನ್‌ ಮಾಡಲಾಗಿದೆ. ರೋಹಿತ್‌ ಶರ್ಮಾರನ್ನು ಕ್ಯಾಪ್ಟನ್‌ ಶಿಫ್‌ನಿಂದ ಕೈ ಬಿಟ್ಟರು ಅವರು ಟೀಂ ಸೇರಿಕೊಂಡು ತಮ್ಮ ಅದ್ಭುತ ಪ್ರದರ್ಶನವನ್ನು ಆರಂಭಿಕ ಪಂದ್ಯದಲ್ಲಿಯೇ ತೋರಿದ್ದಾರೆ. ಇದರ ನಡುವೆಯು ಮುಂಬೈಗೆ ಮೊದಲ ಮ್ಯಾಚ್‌ನಲ್ಲಿಯೇ ಸೋಲು ಎದುರಾಗಿದೆ. 

ಇವೆಲ್ಲದರ ನಡುವೆ ರೋಹಿತ್‌ ಹಾಗೂ ಹಾರ್ದಿಕ್‌ ನಡುವೆ ಫ್ಯಾನ್ಸ್‌ ರೋಹಿತ್‌ರನ್ನ ಆಯ್ಕೆ ಮಾಡಿಕೊಂಡಿದ್ದು ಹಾರ್ದಿಕ್‌ರನ್ನ ಟೀಕಿಸುತ್ತಿದ್ದಾರೆ. #HardikPandya #RohitSharma???? #gujarat #ipl #RCBvsPBKS #ViratKohli ಹ್ಯಾಶ್‌ ಟ್ಯಾಗ್‌ಗಳಲ್ಲಿ ರೋಹಿತ್‌ ಶರ್ಮರ ಪರವಾಗಿ ಅಭಿಮಾನಿಗಳು ಬ್ಯಾಟ್‌ ಬೀಸುತ್ತಿದ್ದಾರೆ. 

ರೋಹಿತ್ ಶರ್ಮಾಗೆ ಅಗೌರವ ತೋರುವಂತಿದ್ದ ಹಾರ್ದಿಕ ನಡೆ

ಇಂಡಿಯನ್ ಪ್ರೀಮಿಯರ್ ಲೀಗ್ ನ 17ನೇ ಆವೃತ್ತಿಯಲ್ಲಿನ ಮೊದಲ ಮ್ಯಾಚ್‌ನಲ್ಲಿಯೇ ಮುಂಬೈ ಸೋಲು ಕಂಡಿದೆ. ಈ ಸೋಲಿಗೆ ಹಾರ್ದಿಕ್‌ ಪಾಂಡ್ಯರನ್ನ ಹೊಣೆಗಾರನನ್ನಾಗಿಸಲಾಗುತ್ತಿದೆ. ಮೇಲಾಗಿ ಆಟದ ವೇಳೆ ಪಾಂಡ್ಯ ರೋಹಿತ್‌ ಶರ್ಮರ ಜೊತೆ ನಡೆದುಕೊಂಡ ರೀತಿಯು ಅಭಿಮಾನಿಗಳಿಗೆ ಬೇಸರ ಮೂಡಿಸುತ್ತಿದೆ. ಅದಕ್ಕೆ ಸಂಬಂಧಿಸಿದ ಕ್ಲಿಪ್ಪಿಂಗ್‌ಗಳು ವೈರಲ್‌ ಆಗುತ್ತಿದೆ.  

ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆದಿತ್ತು .ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಆಟಗಾರರನ್ನು ಸೆಟ್ ಮಾಡುವಾಗ ರೋಹಿತ್ ಶರ್ಮಾರಿಗೆ ಎಲ್ಲಿ ಫಿಲ್ಡ್‌ ಮಾಡಬೇಕು ಎಂದು ಕೈಸನ್ನೆ ಮೂಲಕ ಪಾಂಡ್ಯ ತೋರುತ್ತಿದ್ದರು. ಪಾಂಡ್ಯ ಯಾರಿಗೆ ಸಿಗ್ನಲ್‌ ಮಾಡುತ್ತಿದ್ದಾರೆ ಎಂದು ಅರ್ಥವಾಗದೇ ರೋಹಿತ್‌ ತಮಗಾ ಹೇಳುತ್ತಿರುವುದು ಎಂದು ಸನ್ನೆಯಲ್ಲಿಯೇ ಕೇಳಿದ್ದಾರೆ. ಆನಂತರ ಕ್ಯಾಪ್ಟನ್‌ ಹೇಳಿದ ಜಾಗದಲ್ಲಿ ರೋಹಿತ್‌ ಫೀಲ್ಡ್‌ ನಿಂತಿದ್ದಾರೆ.  

ಆದರೆ ಈ ವರ್ತನೆ  ಮುಂಬೈ ಇಂಡಿಯನ್ಸ್‌ ಅಭಿಮಾನಿಗಳನ್ನ ಸಿಟ್ಟಿಗೆಬ್ಬಿಸಿದ್ದು ವಿಶೇಷ. ಆ ಕಾರಣಕ್ಕೆ ಈ ಸಲದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು. ರೋಹಿತ್‌ರನ್ನ ರಾಜ, ಮಹಾರಾಜ ಎನ್ನುತ್ತಿರುವ ಅಭಿಮಾನಿಗಳು ಅವರನ್ನ ಬಾಹುಬಲಿಗೂ, ಪಾಂಡ್ಯರನ್ನ ಬಲ್ಲಾಳನಿಗೂ ಹೋಲಿಸುತ್ತಿದ್ದಾರೆ. ಅಭಿಮಾನಿಗಳ ಈ  ಸೋಶಿಯಲ್‌ ಮೀಡಿಯಾ ಕ್ಯಾಂಪೇನ್‌ಗಳು ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ.