ಗಂಡು ಮಗನಿಗಾಗಿ ಗುದ್ದಾಟ | ಹೆಂಡ್ತಿಗೆ ಹೊಡೆದು ಮಗಳನ್ನು ಸಾಯಿಸಲು ಮುಂದಾದನೇ ಗಂಡ!? ಏನಿದು ಪ್ರಕರಣ?
ripponpet police station

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 6, 2025
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕುನಲ್ಲಿ ಕೌಟುಂಬಿಕ ಕಲಹದ ಪ್ರಕರಣವೊಂದು ಮಾನವೀಯತೆಯ ಎಲ್ಲೆ ಮೀರಿದೆ. ಪತ್ನಿಯ ಮೇಳೆ ಪತಿರಾಯನೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದು, ತನ್ನ ಮಗುವನ್ನು ತಾನೆ ಸಾಯಿಸಲು ಪ್ರಯತ್ನಿಸಿದ ಆರೋಪದ ಅಡಿಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇಲ್ಲಿನ ಅರಸಾಳು ಗ್ರಾಮದ ನಿವಾಸಿ ಸುನೀತಾ ಸಂತ್ರಸ್ತೆಯಾಗಿದ್ದು, ಅವರು ಆರೋಪಿಸಿರುವಂತೆ, ಸಂತ್ರಸ್ತೆಯ ಪತಿಗೆ ಗಂಡು ಮಗು ಬೇಕಿತ್ತು. ಆದರೆ ಪತ್ನಿ ಗಂಡು ಮಗು ಹೆತ್ತುಕೊಟ್ಟಿಲ್ಲವೆಂದು ನಿತ್ಯ ದೂರುತ್ತಾ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸ್ತಿದ್ದರು ಎಂಬುದು ದೂರು.
ಇತ್ತೀಚೆಗೆ ಈ ಜಗಳ ತಾರಕ್ಕಕೇ ಹೋಗಿ, ಹೊರಗಡೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದ ಸುನೀತಾ ಮೇಲೆ ಪತಿ ಹಾಗೂ ಸಂತ್ರಸ್ತೆಯ ಅತ್ತೆ ಮತ್ತು ನಾದಿನಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಮೇಲಾಗಿ ತಮ್ಮ ಪತಿ, ತನ್ನ ಮಗುವನ್ನು ಸಾಯಿಸಲು ಯತ್ನಿಸಿದ್ದ ಎಂದು ಸಹ ಆರೋಪಿಸಿದ್ದಾರೆ ಸಂತ್ರಸ್ತೆ.
ಸದ್ಯ ಇವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಿಪ್ಪನ್ ಪೇಟೆ ಪೊಲೀಸ್ ಠಾಣೆ ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.