ಮದುವೆ ಮುಗಿಸಿಕೊಂಡು ಬರುತ್ತಿದ್ದ ವೇಳೆ ಆಘಾತ |ನಿವೃತ್ತ ಸಹಾಯಕ ಎಂಜಿನಿಯರ್ ಸಾವು
resident of Gadikoppa was killed, collision between a goods vehicle and a car
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 10, 2024
ಗೂಡ್ಸ್ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿಯಾದ ಪರಿಣಾಮ ಗಾಡಿಕೊಪ್ಪ ನಿವಾಸಿ, ವಿಜ್ಞಾನ ಇಂಡಸ್ಟ್ರೀಸ್ ನಿವೃತ್ತ ಸಹಾಯಕ ಎಂಜಿನಿಯರ್ ನಾಗರಾಜ್ (75) ಮೃತಪಟ್ಟಿದ್ದಾರೆ.
ಕಳೆದ ಭಾನುವಾರ ಇವರು ಕುಟುಂಬ ಸಮೇತ ಸಾಗರ ಸಮೀಪದ ವಿಟ್ಲಕೊಪ್ಪದ ತಮ್ಮ ಸಂಬಂಧಿಕರ ಮದುವೆಗೆ ಹೋಗಿದ್ದರು. ವಾಪಸ್ ಬರುವಾಗ ಕುಂಸಿ-ಆಯನೂರು ಮಾರ್ಗ ಮಧ್ಯೆ ದೊಡ್ಡದಾನವಂದಿ ಬಳಿ ಶಿವಮೊಗ್ಗದಿಂದ ಸಾಗರ ಕಡೆಗೆ ಸಾಗುತ್ತಿದ್ದ ಗೂಡ್ಸ್ ವಾಹನ ಇವರ ಕಾರಿಗೆ ಡಿಕ್ಕಿಯಾಗಿದೆ.
ಪರಿಣಾಮ ಕಾರು ಪಲ್ಟಿಯಾಗಿದ್ದು, ನಾಗರಾಜ್ ಅವರ ಎದೆ ಹಾಗೂ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SUMMARY | resident of Gadikoppa was killed in a collision between a goods vehicle and a car
KEY WORDS | resident of Gadikoppa was killed, collision between a goods vehicle and a car