Whatsapp ಗ್ರೂಪ್‌ನಲ್ಲಿ ಬರುವ ಆ ಮಸೇಜ್‌ ಮೇಲೆ ಕ್ಲಿಕ್‌ ಮಾಡಲೇಬೇಡಿ | ಜಸ್ಟ್‌ ಮುಟ್ಟಿದ್ದಕ್ಕೆ 4.5 ಲಕ್ಷ ಖಾಲಿ! ಎಲ್ಲರಿಗೂ ವಿಷಯ ತಿಳಿಸಿ

resident of Nehru Colony in Shiralakoppa town of Shikaripura taluk in Shivamogga district has lost Rs 4.61 lakh after being duped by cyber crime.

Whatsapp ಗ್ರೂಪ್‌ನಲ್ಲಿ ಬರುವ ಆ ಮಸೇಜ್‌ ಮೇಲೆ ಕ್ಲಿಕ್‌ ಮಾಡಲೇಬೇಡಿ | ಜಸ್ಟ್‌ ಮುಟ್ಟಿದ್ದಕ್ಕೆ 4.5 ಲಕ್ಷ ಖಾಲಿ! ಎಲ್ಲರಿಗೂ ವಿಷಯ ತಿಳಿಸಿ
resident of Nehru Colony, in Shiralakoppa town of Shikaripura taluk ,Shivamogga district , cyber crime

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 6, 2024  

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು  ಶಿರಾಳಕೊಪ್ಪ ಪಟ್ಟಣದ ನೆಹರೂ ಕಾಲೊನಿ ನಿವಾಸಿಯೊಬ್ಬರು ಸೈಬರ್‌ ಕ್ರೈಂನಿಂದ ವಂಚನೆಗೆ ಒಳಗಾಗಿ ಬರೋಬ್ಬರಿ  ₹ 4.61 ಲಕ್ಷ ಕಳೆದುಕೊಂಡಿದ್ದಾರೆ.

 

ಏನಿದು ಪ್ರಕರಣ 

ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಉಳಿತಾಯ ಖಾತೆ ಹೊಂದಿರುವ ಇಲ್ಲಿನ ಜಾವಿದ್ ಎಂಬವರ ಮೊಬೈಲ್‌ಗೆ ಬ್ಯಾಂಕ್‌ನ ಹೆಸರು ಇರುವ ಎಪಿಕೆ ಫೈಲ್‌ ಒಂದು ಸೆಂಡ್‌ ಆಗಿದೆ. ಸಾಮಾನ್ಯವಾಗಿ ಇಂತಹ ಫೈಲ್‌ ಕ್ಲಿಕ್‌ ಮಾಡಿದರೆ ನಿಮಗೆ ಹಣ ಸಿಗುವುದು ಎಂದು ಮೆಸೇಜ್‌ ಅದರಲ್ಲಿ ಇರುತ್ತದೆ. ಇತ್ತೀಚೆಗೆ ನಿಮ್ಮ ಮೊಬೈಲ್‌ನ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಯಾವುದೋ ನಂಬರ್‌ನಿಂದ ಈ ರೀತಿಯ ಮೆಸೇಜ್‌ ಗಳು ವ್ಯಾಪಕವಾಗಿ ಬರುತ್ತಿದೆ. ಇದರ ಮೇಲೆ ಕ್ಲಿಕ್‌ ಮಾಡಿದೆ, ಆ APK ಪೈಲ್‌ ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆಗಿ, ನಿಮ್ಮ ಮೊಬೈಲ್‌ನ ಕಂಟ್ರೋಲ್‌ ಪೂರ ಸೈಬರ್‌ ವಂಚಕರಿಗೆ ನೀಡುತ್ತದೆ. ಆ ಬಳಿಕ ನಿಮ್ಮ ಅಕೌಂಟ್‌ ಖಾಲಿ ಮಾಡುತ್ತದೆ. 

ಇದೇ ರೀತಿಯಲ್ಲಿ ಜಾವಿದ್‌ರವರನ್ನ ವಂಚಿಸಲಾಗಿದೆ. ಬ್ಯಾಂಕ್‌ನ ಹೆಸರು ಇದ್ದುದರಿಂದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ್ದಾರೆ. ಆಗ ವಂಚಕರು ಅವರ ಖಾತೆಯನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸಿದ್ದಾರೆ. ವ್ಯಾಪಾರಕ್ಕಾಗಿ ಸಾಲ ಮಾಡಿದ್ದ ಅವರು ಮೊಬೈಲ್ ಮೂಲಕ ಗ್ರಾಹಕರಿಗೆ ಹಣ ಕಳುಹಿಸಲು ಉಳಿತಾಯ ಖಾತೆಯಲ್ಲಿ ಹಣ ಇಟ್ಟುಕೊಂಡಿದ್ದರು. ಅವರ ಖಾತೆಯಿಂದ ಮೊದಲು ₹ 3,61,469 ಮತ್ತು ನಂತರ ₹ 74,000 ಮೊತ್ತ ವರ್ಗಾವಣೆಗೊಂಡಿದೆ.

SUMMARY   |A resident of Nehru Colony in Shiralakoppa town of Shikaripura taluk in Shivamogga district has lost Rs 4.61 lakh after being duped by cyber crime.



KEYWORDS |  resident of Nehru Colony, in Shiralakoppa town of Shikaripura taluk ,Shivamogga district , cyber crime