ಪುಟ್ಟ ಮಗುವಿನ ಜೊತೆ ಸೇತುವೆ ಹತ್ತಿ ಹಾರಲು ಯತ್ನಿಸಿದ ಯುವಕ | ನಡೆದಿದ್ದೇನು?

Mangaluru, youthwas trying to commit suicide along with his child , rescued in Gurupura 

ಪುಟ್ಟ ಮಗುವಿನ ಜೊತೆ ಸೇತುವೆ ಹತ್ತಿ ಹಾರಲು ಯತ್ನಿಸಿದ ಯುವಕ | ನಡೆದಿದ್ದೇನು?
Mangaluru, youth was trying to commit suicide along with his child , rescued in Gurupura 

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 11, 2024 

ಪುಟಾಣಿ ಮಗುವನ್ನ ಎತ್ತಿಕೊಂಡು ಸೇತುವೆಯ ಬ್ಯಾರಿಕೇಡ್‌ ಮೇಲೆ ನಿಂತು ನದಿಗೆ ಹಾರುವ ಪ್ರಯತ್ನ ಮಾಡುತ್ತಿದ್ದ ಯುವಕ ಹಾಗೂ ಆ ಮಗುವನ್ನ ಸ್ಥಳೀಯ ಉಪಾಯದ ಮೂಲಕ ರಕ್ಷಣೆ ಮಾಡಿದ್ದಾರೆ. ಮಂಗಳೂರಿನ ಗುರುಪುರದಲ್ಲಿ ಘಟನೆ ನಡೆದಿದ್ದು ವಿಡಿಯೋ ವೈರಲ್‌ ಆಗುತ್ತಿದೆ. 

ಗುರುಪುರ ಸೇತುವೆಯಿಂದ ಪುಟ್ಟ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಂದಾವರ ಪಡ್ಡಾಯಿ ಪದವಿನ ಸಂದೀಪ್ (34) ಎಂದು ಗುರುತಿಸಲಾಗಿದೆ. 

ಈತ 2 ವರ್ಷದ ಮಗುವನ್ನು ಹಿಡಿದುಕೊಂಡು ಸೇತುವೆ ಮೇಲೆ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಳ್ಳುತ್ತಿದ್ದ. ಅಲ್ಲದೆ ಹತ್ತಿರಬಂದರೇ ಹಾರುವುದಾಗಿ ಹೆದರಿಸುತ್ತಿದ್ದ. ಅಷ್ಟರಲ್ಲಿ ಆತ ಕೆಳಕ್ಕೆ ಇಳಿದಿದ್ದಾನೆ. ಇದೇ ಸಮಯದಲ್ಲಿ ಜನರು ಹಾರಿ ಆತನನ್ನ ಹಿಡಿದುಕೊಂಡಿದ್ದು ಮಗುವನ್ನ ಆತನ ಕೈಯಿಂದ ಎಳೆದುಕೊಂಡಿದ್ದಾರೆ. 

ಯುವಕನಿಗೆ ಒಂದೆರಡು ಧರ್ಮದೇಟು ಕೊಟ್ಟು ಬುದ್ದಿವಾದ ಹೇಳಿದ್ದಾರೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ.  

SUMMARY | Mangaluru, youthwas trying to commit suicide along with his child , rescued in Gurupura 



KEYWORDS |  Mangaluru, youth was trying to commit suicide along with his child , rescued in Gurupura