ಬಾಡಿಗೆಗೆ ಸಿಕ್ತಾನೆ ಬಾಯ್‌ ‍ಫ್ರೆಂಡ್‌ | ವೈರಲ್‌ ಆಯ್ತು ಪೋಸ್ಟರ್‌ | ನಮ್‌ ಕಾಲದಲ್ಲಿ ಹಿಂಗಿರಲಿಲ್ಲ

rent a boyfriend poster in bangalore

ಬಾಡಿಗೆಗೆ ಸಿಕ್ತಾನೆ ಬಾಯ್‌ ‍ಫ್ರೆಂಡ್‌ | ವೈರಲ್‌ ಆಯ್ತು ಪೋಸ್ಟರ್‌ | ನಮ್‌ ಕಾಲದಲ್ಲಿ  ಹಿಂಗಿರಲಿಲ್ಲ
rent a boyfriend poster in bangalore

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 15, 2025 ‌‌ 

ಎಲ್ಲದಕ್ಕೂ ಆಪ್ಶನ್‌ ಕೇಳುವವರ ನಡುವೆ ಈ ವೈಫೈ ಕಾಲದಲ್ಲಿ ಪ್ರತಿಯೊಂದಕ್ಕೂ ಪ್ರತಿಯೊಂದಕ್ಕೂ ಪರ್ಯಾಯ ಬರುತ್ತಿದೆ. ದುಡ್ಡು ಕೊಟ್ಟರೇ ಸಾಕು ಬೆಂಗಳೂರಿನಲ್ಲಿ ಏನೂ ಬೇಕಾದರೂ ಸಿಗುತ್ತಿದೆ. ಮನೆಯಿಂದ ಹಿಡಿದು ಪರುಷನವರೆಗೂ ಪ್ರತಿಯೊಂದು ಇಲ್ಲಿ ಬಾಡಿಗೆ ಸಿಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಪ್ರೇಮಿಗಳ ದಿನದಂದು ಬಾಡಿಗೆ ಬಾಯ್‌ಪ್ರೆಂಡ್‌ ಬೇಕಾಗಿದ್ದಲ್ಲಿ ಸಂಪರ್ಕಿಸಿ ಎಂಬ ಪೋಸ್ಟರ್‌ಗಳು ಬೆಂಗಳೂರಿನಲ್ಲಿ ಸಖತ್‌ ಸದ್ದು ಮಾಡಿವೆ. ಅಲ್ಲದೆ ಮೀಡಿಯಾಗಳಿಗೆ ಸುದ್ದಿಯ ಆಹಾರವಾಗಿದೆ. 

ಏನಿದು ಬಾಡಿಗೆ ಬಾಯ್‌ ಫ್ರೆಂಡ್‌

ಬೆಂಗಳೂರಿನ  ಜಯನಗರ ಸುತ್ತಮುತ್ತ ಮತ್ತು ಬನಶಂಕರಿಯ ಏರಿಯಾಗಳಲ್ಲಿ ಪಿಂಕ್‌ ಕಲರ್‌ ಪೋಸ್ಟರ್‌ಗಳನ್ನು ಎಲ್ಲೆಂದರಲ್ಲಿ ಅಂಟಿಸಲಾಗಿದ್ದು ಜಸ್ಟ್‌ 389 ರೂಪಾಯಿ ಕೊಟ್ಟರೆ, ದಿನದ ಮಟ್ಟಿಗೆ ಬಾಯ್‌ ಪ್ರೆಂಡ್‌ ಬಾಡಿಗೆ ಸಿಗುತ್ತಾರೆ ಎಂಧು ಬರೆಯಲಾಗಿದೆ. ಬಾಯ್‌ ಫ್ರೆಂಡ್‌ ಬೇಕಾದರೆ ಸ್ಕ್ಯಾನ್‌ ಮಾಡಿ ಎಂದು ಪೋಸ್ಟರ್‌ ಅಂಟಿಸಿದ್ದು. ಜನರು ಈ ಪೋಸ್ಟರ್‌ಗಳನ್ನು ವಿಚಿತ್ರವಾಗಿ ಗಮನಿಸಿದ್ದಾರೆ. ಕೆಲವರು ಇದೊಂದು ಸ್ಕ್ಯಾಮ್‌ ಎಂದು ಕೊಂಡರೆ ಮತ್ತೆ ಕೆಲವರು ಸ್ಕ್ಯಾನ್‌ ಮಾಡಿದರೆ, ಸೈಬರ್‌ ವಂಚನೆ ಆಗಬಹುದು ಎಂದುಕೊಂಡಿದ್ದರು. 

ಮತ್ತೆ ಕೆಲವರು ಈ ಪೋಸ್ಟರ್‌ಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಅಪ್ಲೋಡ್‌ ಮಾಡಿ, ಇದೆಂಥಾ ಕಾಲ ಬಂತಯ್ಯ , ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂಧು ಮಾತನಾಡಿಕೊಳ್ಳುತ್ತಿದ್ದರು. ಈ ನಡುವೆ ಕೆಲವರು ಪೋಸ್ಟರ್‌ ಸ್ಕ್ಯಾನ್‌ ಮಾಡಿ ಪರೀಕ್ಷೆ ಮಾಡಿ ನೋಡಿದಾಗ, ಅದರಲ್ಲಿ ಹೆಣ್ಮಕ್ಕಳ ಸೌಂದರ್ಯಕ್ಕೆ ಸಂಬಂಧಿಸಿದ ಸಾಮಗ್ರಿಗಳ ಮಾಹಿತಿ ಒದಗಿಸಿರುವುದು ಕಂಡುಬಂದಿದೆ. ಹೀಗಾಗಿ ಇದೊಂದು ಮಾರ್ಕೆಂಟಿಂಗ್‌ ಸ್ಟ್ಯಾಟರ್ಜಿ ಎಂದು ಸಹ ಹೇಳಲಾಗುತ್ತಿದೆ.  

 

SUMMARY |   rent a boyfriend poster in bangalore,  

KEY WORDS |  rent a boyfriend poster in bangalore,