Rare incident | ಬೆಕ್ಕು ಕಚ್ಚಿ ಜ್ವರ ಬಂದು ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು
Rare incident | Woman dies of fever after being bitten by a cat Shikaripura, cat bite death, Shivamogga, Meggan Hospital, Shikaripura Taluk Hospital, Rabies Injection,
SHIVAMOGGA | MALENADUTODAY NEWS | Aug 9, 2024 ಮಲೆನಾಡು ಟುಡೆ
ಸಾಮಾನ್ಯವಾಗಿ ನಾಯಿ ಕಚ್ಚಿ, ರೇಬಿಸ್ ರೋಗಕ್ಕೆ ತುತ್ತಾಗುವ ವಿಚಾರಗಳನ್ನ ಕೇಳಿರುತ್ತೀರಿ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ನಲ್ಲಿ ಬೆಕ್ಕು ಕಚ್ಚಿದ್ದರಿಂದ ರೇಬಿಸ್ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ಹೆಸರು ಗಂಗಿಬಾಯಿ(50)
ಬೆಕ್ಕು ಕಚ್ಚಿ ಸಾವು
ಶಿಕಾರಿಪುರ ತಾಲ್ಲೂಕು ತರಲಘಟ್ಟದಲ್ಲಿ ಇಂತಹದ್ದೊಂದು ಘಟನೆ ಬಗ್ಗೆ ವರದಿಯಾಗಿದೆ. ಇಲ್ಲಿನ ನಿವಾಸಿ ಗಂಗಿಬಾಯಿಗೆ ಬೆಕ್ಕೊಂದು ಕಚ್ಚಿತ್ತು ಎನ್ನಲಾಗಿದೆ. ಆನಂತರ ಅವರಿಗೆ ಇಂಜೆಕ್ಷನ್ ಪಡೆಯುವಂತೆ ಹಲವರು ಹೇಳಿದ್ದರು, ಆಶಾ ಕಾರ್ಯಕರ್ತೆಯರು ಸಹ ಎಚ್ಚರಿಸಿದ್ದರು. ಆದರೆ ಗಂಗಿಬಾಯಿ ಕೇವಲ ಒಂದು ಸಲ ಇಂಜೆಕ್ಷನ್ ಪಡೆದು ಆನಂತರ ಸುಮ್ಮನಾಗಿದ್ದರು.
ಕೃಷಿ ಕೆಲಸಕ್ಕೆ ಹೋಗಿದ್ದಾಗ ಬಂತು ಜ್ವರ
ಈ ನಡುವೆ ಕೃಷಿ ಕೆಲಸದಲ್ಲಿ ತೊಡಗಿದ್ದ ಗಂಗಿಬಾಯಿಗೆ ಜ್ವರ ಕಾಣಿಸಿದೆ. ಬಳಿಕ ಅವರನ್ನ ಶಿಕಾರಿಪುರ ತಾಲ್ಲೂಕು ಆಸ್ಪತ್ರೆಗೆ ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ (McGann) ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇನ್ನೂ ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಗಂಗಿಬಾಯಿ ಒಂದು ಬಾರಿ ಮಾತ್ರ ಇಂಜೆಕ್ಷನ್ ಪಡೆದಿದ್ದರು, ಆನಂತರ ಅವರು ಇಂಜೆಕ್ಷನ್ ತೆಗೆದುಕೊಂಡಿರಲಿಲ್ಲ. ಇದು ಅವರ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ.