ಇವತ್ತು ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಮಳೆ | ನಾಳೆಯಿಂದ ಗುಡ್‌ ನ್ಯೂಸ್

Light rain is likely at isolated places, Kodagu, Shivamogga, Chikkamagaluru, Mysuru, Kolar, Bengaluru Urban, Bengaluru Rural, Chikkaballapura ,Chamarajanagar districts 

ಇವತ್ತು ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಮಳೆ | ನಾಳೆಯಿಂದ ಗುಡ್‌ ನ್ಯೂಸ್
Light rain is likely at isolated places, Kodagu, Shivamogga, Chikkamagaluru, Mysuru, Kolar, Bengaluru Urban, Bengaluru Rural, Chikkaballapura ,Chamarajanagar districts 

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024

ಶಿವಮೊಗ್ಗವೂ ಸೇರಿದಂತೆ ವಿವಿದೆಡೆ ಇವತ್ತು ಮಳೆಯಾಗಲಿದ್ದು ನಾಳೆಯಿಂದ ಮೂರು ದಿನಗಳ ಕಾಲ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ದೈನಂದಿನ ಹವಾಮಾನ ಮುನ್ಸೂಚನೆಯ ಬುಲೆಟಿನ್‌ನಲ್ಲಿ ತಿಳಿಸಿದೆ

ಹವಾಮಾನ ಇಲಾಖೆ ಬೆಂಗಳೂರು 

ಮಾಹಿತಿ ಪ್ರಕಾರಣ ಇವತ್ತು ಸಂಜೆಯವರೆಗೂ ಶಿವಮೊಗ್ಗದಲ್ಲಿ ಮಳೆ ಇರಲಿದೆ. ಕನಿಷ್ಟ 21.00 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದ್ದು, ಗರಿಷ್ಟ 27.00 ಡಿಗ್ರಿಯಷ್ಟು ತಾಪಮಾನವಿರಲಿದೆ. 

ಇನ್ನೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉತ್ತರ ಒಳ ಕರ್ನಾಟಕ, ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ  ಮಳೆಯಾಗುವ ಸಾದ್ಯತೆ ಇದ್ದು ನಾಳೆ ನಾಡಿದ್ದು ಆಚೆ ನಾಡಿದ್ದು ರಾಜ್ಯದೆಲ್ಲಡೆ ಒಣ ಹವೆಯಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

SUMMARY | Light rain is likely to occur at isolated places over Kodagu, Shivamogga, Chikkamagaluru, Mysuru, Kolar, Bengaluru Urban, Bengaluru Rural, Chikkaballapura and Chamarajanagar districts.

KEY WORDS | Light rain is likely at isolated places, Kodagu, Shivamogga, Chikkamagaluru, Mysuru, Kolar, Bengaluru Urban, Bengaluru Rural, Chikkaballapura ,Chamarajanagar districts