ಬೆಂಗಳೂರಿಗೆ ಹೋಗುತ್ತಿದ್ದ ಬಸ್‌ ಕರೆಂಟ್‌ ಕಂಬಕ್ಕೆ ಡಿಕ್ಕಿ | ವಾಹನದ ಮೇಲೆ ಬಿದ್ದ ಕರೆಂಟ್‌ ವಯರ್‌ | ಸ್ವಲ್ಪದರಲ್ಲಿಯೇ ಬಚಾವ್‌

private bus traveling from Shivamogga to Bengaluru narrowly avoided disaster last night when it hit an electric pole

ಬೆಂಗಳೂರಿಗೆ ಹೋಗುತ್ತಿದ್ದ ಬಸ್‌ ಕರೆಂಟ್‌ ಕಂಬಕ್ಕೆ ಡಿಕ್ಕಿ |  ವಾಹನದ ಮೇಲೆ ಬಿದ್ದ ಕರೆಂಟ್‌ ವಯರ್‌ | ಸ್ವಲ್ಪದರಲ್ಲಿಯೇ ಬಚಾವ್‌
Shivamogga to Bengaluru bus

SHIVAMOGGA | MALENADUTODAY NEWS | Jul 9, 2024  ಮಲೆನಾಡು

ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಸ್ವಲ್ಪದರಲ್ಲಿಯೇ ದುರಂತವೊಂದು ತಪ್ಪಿದೆ. ಖಾಸಗಿ ಬಸ್‌ವೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಕರೆಂಟ್‌ ವಯರ್‌ ಬಸ್‌ ಮೇಲೆ ಬಿದ್ದಿತ್ತು.  ಅದೃಷ್ಟಕ್ಕೆ ತಕ್ಷಣವೆ ಅಲ್ಲಿದ್ದವರು ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್‌ ಕಟ್‌ ಮಾಡಿಸಿದ ಪರಿಣಾಮ ಯಾರಿಗೂ ಅಪಾಯವಾಗಿಲ್ಲ. 

ಪಿಳ್ಖಂಗರೆ ಕ್ರಾಸ್‌ 

ನಿನ್ನೆ ಮಧ್ಯರಾತ್ರಿ ಶಿವಮೊಗ್ಗದಿಂದ ಬೆಂಗಳೂರಿಗೆ ಖಾಸಗಿ ಬಸ್‌ ತೆರಳುತ್ತಿತ್ತು.ಆಕಸ್ಮಾತ್‌ ಆಗಿ ಬಸ್‌  ಚಾಲಕನ ನಿಯಂತ್ರಣ ತಪ್ಪಿ ಪಿಳ್ಳಂಗೆರೆ ಕ್ರಾಸ್‌ ಬಳಿಯಲ್ಲಿ ಒಮಿನಿ ಕಾರಿಗೆ ಡಿಕ್ಕಿಯಾಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ  ವಿದ್ಯುತ್‌ ವಯರ್‌ ಬಸ್‌ ಮೇಲೆ ಬಿದ್ದಿತ್ತು. ತಂತಿಯಲ್ಲಿ ಇನ್ನೂ ವಿದ್ಯುತ್‌ ಪ್ರವಹಿಸುತ್ತಿತ್ತು. 

ಪ್ರಯಾಣಿಕರ ರಕ್ಷಣೆ 

ಇದೇ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ವೆಹಿಕಲ್‌ಗಳ ಸವಾರರು ತಮ್ಮ ವಾಹನ ನಿಲ್ಲಿಸಿ ರಕ್ಷಣೆಗೆ ದೌಡಾಯಿಸಿದ್ದಾರೆ. ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್‌ ಹರಿವಿಕೆಯನ್ನ ನಿಲ್ಲಿಸಿದ್ದಾರೆ. ಆ ಬಳಿಕ ಬಸ್‌ನಿಂದ ಪ್ರಯಾಣಿಕರನ್ನ ಹೊರಕ್ಕೆ ಕರೆತಂದಿದ್ದಾರೆ. ಇನ್ನೂ ಸ್ಥಳಕ್ಕೆ ಬಂದ ಸ್ಥಳೀಯ ಗ್ರಾಮಸ್ಥರು ಪ್ರಯಾಣಿಕರಿಗೆ ಪ್ರಾಥಮಿಕ ಚಿಕಿತ್ಸೆ ನೆರವಾಗಿ ಆಂಬುಲೆನ್ಸ್‌ ಕರೆಸಿ, ಅವರನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಚಾಲಕನಿಗೆ ಗಂಭಿರ ಗಾಯವಾಗಿದ್ದು, ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. 

A private bus traveling from Shivamogga to Bengaluru narrowly avoided disaster last night when it hit an electric pole,