Power cut Shivamogga | ನಾಳೆ ದಿನವಿಡಿ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿಯ ಈ ಎರಿಯಾಗಳಲ್ಲಿ ಪವರ್‌ ಕಟ್‌

ಮೆಸ್ಕಾಂ ಶಿವಮೊಗ್ಗ ವಿವಿಧೆಡೆ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಭದ್ರಾವತಿ , ಶಿವಮೊಗ್ಗ , ಶಿವಮೊಗ್ಗ ಗ್ರಾಮಾಂತದ ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ಇರೊದಿಲ್ಲ ಎಂದು ಪ್ರಕಟಣೆ ನೀಡಿದೆ.

Power cut Shivamogga | ನಾಳೆ ದಿನವಿಡಿ  ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿಯ ಈ ಎರಿಯಾಗಳಲ್ಲಿ ಪವರ್‌ ಕಟ್‌
power cut in malenadu today Mescom Shivamogga

SHIVAMOGGA | MALENADUTODAY NEWS | Aug 24, 2024 ಮಲೆನಾಡು ಟುಡೆ  

ಶಿವಮೊಗ್ಗ ಹಾಗೂ ಭದ್ರಾವತಿಯ ವಿವಿಧ ಏರಿಯಾಗಳಲ್ಲಿ ನಾಳೆದಿನ  ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಶಿವಮೊಗ್ಗ (Mescom Shimoga) ವಿಭಾಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅದರ ವಿವರ ಹೀಗಿದೆ. 



ಮೆಸ್ಕಾಂ ಗ್ರಾಮಾಂತ/ ನಗರ ಉಪವಿಭಾಗ  ದಲ್ಲಿ ವ್ಯವಸ್ಥೆ ಸುಧಾರಣೆ ಕಾಮಗಾರಿಯ ಕಾರಣ ಅಗಸ್ಟ್ 25 ರ ಭಾನುವಾರ ಬೆಳಗ್ಗೆ  10 - 30 ರಿಂದ ಸಂಜೆ 05 - 30  ಗಂಟೆವರೆಗೆ ಭದ್ರಾವತಿಯ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್‌ ಇರೋದಿಲ್ಲ. 

ಲೋಯರ್ ಹುತ್ತಾ

ದೊಣಬಘಟ್ಟ, ತಡಸ, ಪದ್ಮೇನಹಳ್ಳಿ, ಬಿ.ಹೆಚ್. ರಸ್ತೆ, ಲೋಯರ್ ಹುತ್ತಾ, ದೊಣಬಘಟ್ಟ  ರಸ್ತೆ, ಕೈಗಾರಿಕಾ ಪ್ರದೇಶ, ಅರಣ್ಯ ಇಲಾಖೆ ದಾಸ್ತಾನು ಕಛೇರಿ, ಹೆಬ್ಬಂಡಿ, ಕವಲುಗೊಂದಿ, ಕಡದಕಟ್ಟೆ, ಐ.ಟಿ.ಐ. ಸುತ್ತಮುತ್ತ, ರೈಲ್ವೆದ್ವಾರ ಮತ್ತು ಲಕ್ಷ್ಮೀಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಗ್ರಾಗಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.

ತಾವರೆಚಟ್ನಹಳ್ಳಿ 

ಇನ್ನೂ ಇತ್ತ ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿಯು ಸಹ ನಾಳೆ ಅಂದರೆ  ಆಗಸ್ಟ್ 25 ರಂದು ವಿದ್ಯುತ್‌ ಇರೋದಿಲ್ಲ. ತಾವರೆಚಟ್ನಹಳ್ಳಿ 66/11 ಕೆವಿ ವಿವಿ ಕೇಂದ್ರದ ಎಫ್-7 ಚನ್ನಮುಂಬಾಪುರ ಮಾರ್ಗದಲ್ಲಿ ವಾಹಕ ಬದಲಾವಣೆ ಮತ್ತು ತುರ್ತು ನಿರ್ವಹಣೆ ಕಾಮಗಾರಿಯನ್ನ ಮೆಸ್ಕಾಂ ಹಮ್ಮಿಕೊಂಡಿದೆ. 

ಈ ಕಾರಣಕ್ಕೆ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ರತ್ನಗಿರಿನಗರ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಮೋಜಪ್ಪನ ಹೊಸೂರು ಸುತ್ತಮುತ್ತಲಿನ ಕ್ರಷರ್‌ಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. 

ಇನ್ನೂ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 25/08/2024 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಊರಗಡೂರು, ಸೂಳೆಬೈಲು, ಮದಾರಿಪಾಳ್ಯ, ಮಳಲಿಕೊಪ್ಪ, ಬೈಪಾಸ್ ರಸ್ತೆ, ವಾದಿ-ಎ-ಹುದಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಅಂತಾ ಮೆಸ್ಕಾಂ ತಿಳಿಸಿದೆ. 

  ಇನ್ನಷ್ಟು ಸುದ್ದಿಗಳು