ಶಿವಮೊಗ್ಗ, ತೀರ್ಥಹಳ್ಳಿಯ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್‌ ಇರಲ್ಲ | ಡಿಟೇಲ್ಸ್‌ ಓದಿ

power cut in Konandur , M.G. Road, M.K. Road, Melpete, Primary Health Center, Sannikoppa, Masidikeri, Indiranagar, Mangalya Mandir, Banashankari Gudda area.

ಶಿವಮೊಗ್ಗ, ತೀರ್ಥಹಳ್ಳಿಯ ಈ ಪ್ರದೇಶಗಳಲ್ಲಿ ಇವತ್ತು ಕರೆಂಟ್‌ ಇರಲ್ಲ | ಡಿಟೇಲ್ಸ್‌ ಓದಿ
power cut in Konandur , M.G. Road, M.K. Road, Melpete, Primary Health Center, Sannikoppa, Masidikeri, Indiranagar, Mangalya Mandir, Banashankari Gudda area.

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 4, 2025 ‌‌ 

ಜನವರಿ 4 ಅಂದರೆ ಇವತ್ತು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. 

ಎಂಸಿಎಫ್-1, ಎಂಸಿಎಫ್-3 ಎಂಸಿಎಫ್-4, ಎಂಸಿಎಫ್-14 ಎಂಸಿಎಫ್-17, ಎಂಸಿಎಫ್-18, ಎಂಸಿಎಫ್-20 ಮತ್ತು ಎಂಸಿಎಫ್-27 ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿಗ್ರಾಮ, ಹೊನ್ನವಿಲೆ,  ಮೆ|| ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕೊಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆಎಸ್‌ಆರ್‌ಪಿ ಕಾಲೋನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಕೆಎಂಎಫ್ ಡೈರಿ ಹಾಗೂ ಸುತ್ತಮುತ್ತನಲ್ಲಿ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಈ ಮೂಲಕ ಕೋರಿದ್ದಾರೆ.

ತೀರ್ಥಹಳ್ಳಿಯಲ್ಲಿ ಕರೆಂಟ್‌ ಇರಲ್ಲ 

ಇವತ್ತು ತೀರ್ಥಹಳ್ಳಿ ತಾಲ್ಲೂಕಿನಲ್ಲಿಯು ಮೆಸ್ಕಾಂ ತುರ್ತು ಕಾಮಗಾರಿ ಹಮ್ಮಿಕೊಂಡಿದೆ. ಈ ಪ್ರಯುಕ್ತ ಜನವರಿ 4ರಂದು ಅಂದರೆ ಇವತ್ತು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಕೋಣಂದೂರಿನ ಎಂ.ಜಿ.ರಸ್ತೆ, ಎಂ.ಕೆ.ರಸ್ತೆ, ಮೇಲ್ಪೇಟೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಣ್ಣಿಕೊಪ್ಪ, ಮಸೀದಿಕೇರಿ, ಇಂದಿರಾನಗರ, ಮಾಂಗಲ್ಯ ಮಂದಿರ, ಬನಶಂಕರಿ ಗುಡ್ಡ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.



SUMMARY |There will be power outages in Konandur's M.G. Road, M.K. Road, Melpet, Primary Health Center, Sannikoppa, Masidikeri, Indiranagar, Mangalya Mandir, Banashankari Gudda area.

KEY WORDS | power cut in Konandur , M.G. Road, M.K. Road, Melpete, Primary Health Center, Sannikoppa, Masidikeri, Indiranagar, Mangalya Mandir, Banashankari Gudda area.