ಈ ಕೆಲಸವನ್ನು ಪೊಲೀಸರು ಮಾಡುತ್ತಾರೆ ಎಂದು ತೋರಿಸಿದ ರಿಪ್ಪನ್‌ ಪೇಟೆ ಪೊಲೀಸ್‌ ಠಾಣೆ ಸಿಬ್ಬಂದಿ

Police officers at the Ripponpete police station in Shivamogga extended financial assistance for the medical treatment

ಈ ಕೆಲಸವನ್ನು ಪೊಲೀಸರು ಮಾಡುತ್ತಾರೆ ಎಂದು ತೋರಿಸಿದ ರಿಪ್ಪನ್‌ ಪೇಟೆ ಪೊಲೀಸ್‌ ಠಾಣೆ ಸಿಬ್ಬಂದಿ
Ripponpete police station in Shivamogga

SHIVAMOGGA | MALENADUTODAY NEWS | Jul 14, 2024  

ಕರ್ತವ್ಯದ ಜೊತೆಜೊತೆಗೆ ಮಾನವೀಯತೆಯ ಅಡಿಯಲ್ಲಿ ಇಬ್ಬರು ಬಾಲಕರ ಚಿಕಿತ್ಸೆಗೆ ಇಡೀ ಪೊಲೀಸ್‌ ಠಾಣೆಯೊಂದು ನೆರವಿನ ಹಸ್ತ ಚಾಚಿದೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣೆ ಪೊಲೀಸರು ಇಂತಹದ್ದೊಂದು ಉದಾರ ಮನೋಭಾವ ತೋರಿದ್ದಾರೆ. 

ರಿಪ್ಪನ್ ಪೇಟೆ ಠಾಣೆ 

ಇತ್ತೀಚೆಗೆ ರಿಪ್ಪನ್ ಪೇಟೆ ಠಾಣೆ ಪಿಎಸ್ಐ  ಪ್ರವೀಣ್ ರವರು ಠಾಣಾ ವ್ಯಾಪ್ತಿಯ ಬರುವೆ ಗ್ರಾಮದಲ್ಲಿ  ನಡೆಸಿದ ಪರಿಶಿಷ್ಟ ಜಾತಿ & ಪರಿಶಿಷ್ಟ ವರ್ಗದವರ ಕುಂದುಕೊರತೆ ಸಭೆ ನಡೆಸಿದ್ದರು. ಈ ವೇಳೆ ಅಲ್ಲಿನ ನಿವಾಸಿ ರಾಮು ಎಂಬವರು ತನ್ನ 3 ವರ್ಷದ ಮಗನಿಗೆ ಹೃದಯ ಸಂಬಂದಿ ಕಾಯಿಲೆ ಇರುವುದಾಗಿ ತಿಳಿಸಿದ್ದರು. ಅದೇ ಸಂದರ್ಭದಲ್ಲಿ ಶೇಖರ್ ಎಂಬವರು ತನ್ನ 10 ವರ್ಷದ ಮಗನಿಗೆ ಹೃದಯ ಸಂಬಂಧ ಖಾಯಿಲೆ ಇದ್ದು ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ, ಆದರೆ ನಮ್ಮ ಆರ್ಥಿಕ ಪರಿಸ್ಥಿತಿಯಿಂದ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಹವಾಲು ತೋಡಿಕೊಂಡಿದ್ದಾರೆ. 

ಅವರುಗಳ ಪರಿಸ್ಥಿತಿಯನ್ನು ಅರಿತ ಪಿಎಸ್ಐ ಪ್ರವೀಣ್‌ ಹಾಗೂ ಪೊಲೀಸ್‌ ಠಾಣೆ ಸಿಬ್ಬಂದಿಗಳು ಸಂತ್ರಸ್ತ ಮಕ್ಕಳಿಗೆ ಚಿಕಿತ್ಸೆ ಮುಂದುವರೆಸಲು ಮತ್ತು ಶಸ್ತ್ರ ಚಿಕಿತ್ಸೆ ಮಾಡಿಸಲು ಪೊಲೀಸ್ ಇಲಾಖಾ ವತಿಯಿಂದ ಆರ್ಥಿಕ ಸಹಾಯ ನೀಡಿದ್ದಾರೆ. ಪೊಲೀಸರ ಕೆಲಸಕ್ಕೆ ಜನರು ಸಹ ಖುಷಿಪಟ್ಟಿದ್ದಾರೆ. 

Police officers at the Ripponpete police station in Shivamogga extended financial assistance for the medical treatment of two young boys suffering from heart ailments.