BREAKING NEWS | ಮತ್ತೆ ಪೊಲೀಸರ ಪಿಸ್ತೂಲ್‌ನಿಂದ ಹಾರಿತು ಗುಂಡು | ಬೆಳಗ್ಗೆ ಬೆಳಗ್ಗೆ ಕುಂಸಿ ಲಿಮಿಟ್ಸ್‌ನಲ್ಲಿ ಫೈರ್‌

police fire in shivamogga police officer shot at the leg of a rowdy sheeter in self-defense in Shivamogga

BREAKING NEWS |  ಮತ್ತೆ  ಪೊಲೀಸರ ಪಿಸ್ತೂಲ್‌ನಿಂದ ಹಾರಿತು ಗುಂಡು | ಬೆಳಗ್ಗೆ ಬೆಳಗ್ಗೆ ಕುಂಸಿ ಲಿಮಿಟ್ಸ್‌ನಲ್ಲಿ ಫೈರ್‌
police fire in shivamogga

SHIVAMOGGA | MALENADUTODAY NEWS | Jul 9, 2024  

ಶಿವಮೊಗ್ಗ ಪೊಲೀಸ್‌ ವಲಯದಲ್ಲಿ ಮತ್ತೊಂದು ಗನ್‌ ಫೈರ್‌ ಕೇಳಿದೆ. ಇವತ್ತು ಪೊಲೀಸ್‌ ಸಿಬ್ಬಂದಿ ಆತ್ಮರಕ್ಷಣೆಗಾಗಿ ರೌಡಿಶೀಟರ್‌ ಒಬ್ಬನ ಕಾಲಿಗೆ ಗುಂಡು ಹಾರಿಸಿದ್ದಾರೆ. ಕುಂಸಿ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಈ ಘಟನೆ ನಡೆದಿದೆ. 

ವಿನೋಬನಗರ ಪೊಲೀಸ್‌ ಸ್ಟೇಷನ್‌

ವಿನೋಬನಗರ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ 109 ಬಿಎನ್ಎಸ್ (ಕೊಲೆ ಯತ್ನ) ಪ್ರಕರಣದಲ್ಲಿ  ಬೇಕಿದ್ದ ಆರೋಪಿ ಹಾಗೂ ಎನ್‌ಡಿಪಿಎಸ್‌ ಆಕ್ಟ್‌ ಅಡಿಯಲ್ಲಿ ಮತ್ತು ಕೊಲೆಯತ್ನ ಪ್ರಕರಣವೂ ಸೇರಿದಂತೆ ಒಟ್ಟು ಐದು ಕೇಸ್‌ಗಳಲ್ಲಿ ಬೇಕಿದ್ದ ಆರೋಪಿಯನ್ನು ಹೊಳೆಹೊನ್ನೂರು ಪೊಲೀಸರು ಇವತ್ತು ಬಂಧಿಸಲು ತೆರಳಿದ್ದರು.

ಕುಂಸಿ ಪೊಲೀಸ್‌ ಸ್ಟೇಷನ್‌ 

ಕುಂಸಿ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ರಜಾಕ್‌ ಎಂಬಾತನ ಇರುವಿಕೆ ಬಗ್ಗೆ ತಿಳಿದು ಹೊಳೆಹೊನ್ನೂರು ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಆತನನ್ನ ಅರೆಸ್ಟ್‌ ಮಾಡಲು ತೆರಳಿದ್ದರು. ಈ ವೇಳ ರಜಾಕ್‌ ಪೊಲೀಸ್‌ ಸಿಬ್ಬಂದಿ ಅರ್ಜುನ್‌ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಆತ್ಮರಕ್ಷಣೆ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್‌ ರಜಾಕ್‌ ಕಾಲಿಗೆ ಗುಂಡೇಟು ನೀಡಿದ್ದಾರೆ.   

ಇನ್ನೂ ಈ ಬಗ್ಗೆ ಎಸ್‌ಪಿ ಮಿಥುನ್‌ ಕುಮಾರ್‌ ಮಾಹಿತಿ ನೀಡಿದ್ದು, ಪ್ರಕರಣದ ವಿವರವನ್ನು ಮಾಧ್ಯಮಗಳ ವಾಟ್ಸಾಪ್‌ಗೆ ರವಾನಿಸಿದ್ದಾರೆ. 

A police officer shot at the leg of a rowdy sheeter in self-defense in Shivamogga. The incident occurred within the jurisdiction of the Kunsi police station