ಕುಂಸಿಗೆ ದೀಪಕ್, ಕೋಟೆಗೆ ಹರೀಶ್ ಪಾಟೀಲ್ | ರಾಜ್ಯ ಸರ್ಕಾರದಿಂದ ಮತ್ತೆ 12 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ | ವಿವರ ಇಲ್ಲಿದೆ
police inspector transfer list Shivamogga | ಈಗಾಗಲೇ ಕೆ ಟಿ ಗುರುರಾಜ್‌ರನ್ನ ತುಂಗಾನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇತ್ತ ಮಂಜುನಾಥ್‌ರನ್ನ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
SHIVAMOGGA | MALENADUTODAY NEWS | Sep 1, 2024 ಮಲೆನಾಡು ಟುಡೆ
ರಾಜ್ಯ ಸರ್ಕಾರ ಮತ್ತೊಂದು ಸುತ್ತಿನ ಪೊಲೀಸ ಇನ್‌ಸ್ಪೆಕ್ಟರ್ ವರ್ಗಾವಣೆ ನಡೆಸಿದ್ದು, ಈ ಸಲ 12 ಮಂದಿಯನ್ನು ವರ್ಗಾವಣೆ ಮಾಡಿದೆ. ಈ ಪೈಕಿ ಕಳೆದ ಆದೇಶದಲ್ಲಿ ಸ್ಥಳ ತೋರಿಸಿದ ಶಿವಮೊಗ್ಗದ ದೀಪಕ್ ಎಂಎಸ್‌ರಿಗೆ ಕುಂಸಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇನ್ನೂ ಕುಂಸಿ ಇನ್‌ಸ್ಪೆಕ್ಟರ್ ಹರೀಶ್ ಪಾಟೀಲ್‌ರನ್ನ ಕೋಟೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಗಣಪತಿ ಹಬ್ಬಕ್ಕೂ ಮುನ್ನ ಆಯಕಟ್ಟಿನಲ್ಲಿ ಕಟ್ಟುನಿಟ್ಟಿನ ಅಧಿಕಾರಿಗಳನ್ನ ವಾಪಸ್ ಕರೆದುಕೊಂಡು ಬರಲಾಗಿದೆ. ಕೆ.ಟಿ.ಗುರುರಾಜ್ ಅವರನ್ನು ತುಂಗಾ ನಗರ ಠಾಣೆಗೆ ಹಾಗೂ ಮಂಜುನಾಥ್ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದೀಗ ಹರೀಶ್ ಪಾಟೀಲ್ ಕೋಟೆ ಪೊಲೀಸ್ ಠಾಣೆಗೆ ಹಾಗೂ ದೀಪಕ್‌ರನ್ನ ಕುಂಸಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಉಳಿದಂತೆ ಸರ್ಕಾರದ ವರ್ಗಾವಣೆ ಆದೇಶದ ವಿವರ ಹೀಗಿದೆ
ಶ್ರೀಕಾಂತ್ ಎಫ್ ತೋಟಗಿ ಲೋಕಸಭಾ ಚುನಾವಣೆ ನಿಮಿತ್ತ ಅಂಕೋಲ ಪೊ.ಠಾ. ಉ.ಕ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಎಸ್.ಸಿ.ಆರ್.ಬಿ ಗೆ ವರ್ಗಾವಣೆ ಆದೇಶದಲ್ಲಿರುವವರು. ಬೆಳಗಾವಿ ಉತ್ತರ ಸಂಚಾರ ಪೊ.ಠಾ, ಬೆಳಗಾವಿ ನಗರ.
ಶ್ರೀಶೈಲ ಗಾಬಿ ಬೆಳಗಾವಿ ಉತ್ತರ ಸಂಚಾರ ಪೊ.ಠಾಣೆ, ಬೆಳಗಾವಿ ನಗರ. ಸ್ಥಳ ನಿರೀಕ್ಷಣೆಯಲ್ಲಿರುವವರು ಖಡೇ ಬಜಾರ್ ಪೊ.ಠಾಣೆ, ಬೆಳಗಾವಿ ನಗರ.
ರಮೇಶ ಜಿ ಎನ್ ಸ್ಥಳ ನಿರೀಕ್ಷಣೆಯಲ್ಲಿರುವವರು ಡಿ.ಸಿ.ಆರ್.ಇ., ಮೈಸೂರು
ದೀಪಕ್ ಎಂ ಎಸ್ ಸ್ಥಳ ನಿರೀಕ್ಷಣೆಯಲ್ಲಿರುವವರು ಕುಂಸಿ ಪೊ.ಠಾಣೆ, ಶಿವಮೊಗ್ಗ ಜಿಲ್ಲೆ.
ಹರೀಶ್ ಕೆ ಪಾಟೀಲ್ ಕುಂಸಿ ಪೊ.ಠಾ, ಶಿವಮೊಗ್ಗ ಜಿಲ್ಲೆ. ಕೋಟೆ ಪೋ.ಠಾ, ಶಿವಮೊಗ್ಗ ಜಿಲ್ಲೆ
ಆಂಜನೇಯ ನೀಲಪ್ಪ ಹರಿಜನ ಕರ್ನಾಟಕ ಲೋಕಾಯುಕ್ತ. ಹಾನಗಲ್ ವೃತ್ತ, ಹಾವೇರಿ ಜಿಲ್ಲೆ.
ಸಂಗಪ್ಪ ಎಂ ಶಿರಗುಪ್ಪಿ ಸಿ.ಇ.ಎನ್ ಪೊ.ಠಾ, ಗದಗ ಜಿಲ್ಲೆಯಿಂದ ಸಿ.ಇ.ಎನ್ ಪೊ.ಠಾಣೆ, ವಿಜಯಪುರ ಜಿಲ್ಲೆಗೆ ವರ್ಗಾವಣೆ ಆದೇಶದಲ್ಲಿರುವವರು. 26.08.2024 ಸಿಇಎನ್ ವಿಜಯಪುರ ಜಿಲ್ಲೆಗೆ ಮಾಡಲಾದ ಆದೇಶವನ್ನು ರದ್ದುಪಡಿಸಿ, ಸಿ.ಇ.ಎನ್ ಪೊ.ಠಾ, ಗದಗ ಜಿಲ್ಲೆಯಲ್ಲಿ ಮುಂದುವರಿಸಲಾಗಿದೆ
ರಮೇಶ ಸಿ ಅವಜಿ ಸಿ.ಇ.ಎನ್ ಪೊ.ಠಾ, ವಿಜಯಪುರ ಜಿಲ್ಲೆಯಿಂದ ಸ್ಥಳ ನಿರೀಕ್ಷಣೆಯ ಆದೇಶದಲ್ಲಿರುವವರು. 26.08.2024 ರಂದು ಸಿ.ಇ.ಎನ್ ಪೊ.ಠಾ, ವಿಜಯಪುರ ಜಿಲ್ಲೆಯಲ್ಲಿಂದ ವರ್ಗಾಯಿಸಿ ಮಾಡಲಾದ ಆದೇಶವನ್ನು ರದ್ದುಪಡಿಸಲಾಗಿದೆ.
ಶ್ರೀನಿವಾಸ ಚಂದ್ರಪ್ಪ ಮೇಟಿ ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯಿಂದ ಲೋಕಸಭಾ ಚುನಾವಣೆ ನಿಮಿತ್ತ ಧಾರವಾಡ ಸಂಚಾರ .ಠಾ., ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು 26.06.2024 8 ಹೊಸಪೇಟೆ ಸಂಚಾರ ಪೊ.ಠಾ.. ಬಳ್ಳಾರಿ ಜಿಲ್ಲೆಗೆ ಮಾಡಲಾದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಧಾರವಾಡ ಸಂಚಾರ ಪೊ.ಠಾ., ಹುಬ್ಬಳ್ಳಿ-ಧಾರವಾಡ ನಗರದಲ್ಲಿಯೇ ಮುಂದುವರೆಸಲಾಗಿದೆ
ಶಶಿಕಾಂತ್ ಆರ್ ನಾಯಕ್ ರಾಜ್ಯ ಗುಪ್ತವಾರ್ತೆಯಿಂದ ಬೆಂಡೆಗೇರಿ ಪೊ.ಠಾ, ಹುಬ್ಬಳ್ಳಿ- ಧಾರವಾಡ ನಗರ.
ರಾಧಕೃಷ್ಣ ಟಿ ಎಸ್ ಜೆ.ಪಿ ನಗರ ಪೊ.ಠಾ, ಬೆಂಗಳೂರು ನಗರ ಜೆ.ಪಿ ನಗರ ಸಂಚಾರ ಪೊ.ಠಾ, ಬೆಂಗಳೂರು ನಗರ (ಹೊಸದಾಗಿ ಸೃಜನೆಯಾದ ಹುದ್ದೆ)
ಬಸವರಾಜ ಭೋಜಪ್ಪ ಲಮಾಣಿ ಡಿ.ಎಸ್.ಬಿ., ಬೆಳಗಾವಿ ಜಿಲ್ಲೆಯಿಂದ ಪಿ.ಟಿ.ಎಸ್., ಖಾನಾಪುರಕ್ಕೆ ವರ್ಗಾವಣೆ ಆದೇಶದಲ್ಲಿರುವವರು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?