4 ದಿನಗಳ ನಡುವೆ ಭದ್ರಾವತಿಯಲ್ಲಿ ಮತ್ತೆ ಹಾರಿತ ಪೊಲೀಸ್‌ ಗುಂಡು | ಶಾಹಿದ್‌ ಕಾಲಿಗೆ PI ನಾಗಮ್ಮರಿಂದ ಗುಂಡೇಟು

police firing in bhadravathi ,  paper town police limits

4 ದಿನಗಳ ನಡುವೆ ಭದ್ರಾವತಿಯಲ್ಲಿ ಮತ್ತೆ ಹಾರಿತ ಪೊಲೀಸ್‌ ಗುಂಡು | ಶಾಹಿದ್‌ ಕಾಲಿಗೆ PI ನಾಗಮ್ಮರಿಂದ ಗುಂಡೇಟು
police firing in bhadravathi ,  paper town police limits

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 24, 2025 ‌‌  

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಪೊಲೀಸರ ಪಿಸ್ತೂಲ್‌ ಮತ್ತೊಮ್ಮೆ ಬುಲೆಟ್‌ ಫೈರ್‌ ಮಾಡಿದೆ.ಕಳೆದ 21 ನೇ ತಾರೀಖು ಇಲ್ಲಿನ  ಹೊಸಮನೆ ಪೊಲೀಸ್‌ ಠಾಣೆಯ ಎಸ್‌ಐ ಕೃಷ್ಣ, ಗುಂಡಾ ಅಲಿಯಾಸ್‌ ರವಿ ಎಂಬಾತನ ಮುಂಗಾಲಿಗೆ ಗುಂಡು ಹೊಡೆದಿದ್ದರು. ಇದೀಗ ಪೇಪರ್‌ ಟೌನ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ನಾಗಮ್ಮ ಮತ್ತೊಬ್ಬ ರೌಡಿಶೀಟರ್‌ಗೆ ಪೊಲೀಸ್‌ ಬುಲೆಟ್‌ನ ರುಚಿ ತೋರಿಸಿದ್ದಾರೆ.

ಭದ್ರಾವತಿಯ ಪೇಪರ್‌ ಟೌನ್‌ ಪೊಲೀಸ್‌ ಲಿಮಿಟ್ಸ್‌ನ ಪೊಲೀಸರು, ಪೊಲೀಸ್‌ ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣವೂ ಸೇರಿದಂತೆ 12 ಕೇಸ್‌ಗಳಲ್ಲಿ ಬೇಕಾಗಿರುವ ರೌಡಿಶೀಟರ್‌ ಶಾಹಿದ್‌ನನ್ನ ಹಿಡಿಯಲು ತೆರಳಿದ್ದರು. ಈ ವೇಳೆ ಆತ ನಾಗರಾಜ್‌ ಎಂಬ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದ. ಅಷ್ಟೊತ್ತಿಗೆ ಪಿಐ ನಾಗಮ್ಮ ಶಾಹಿದ್‌ ಕಾಲಿಗೆ ಗುಂಡು ಹಾರಿಸಿ ಆತನನ್ನ ನೆಲಕ್ಕೆ ಬೀಳಿಸಿದ್ದಾರೆ.ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಪೇಪರ್‌ ಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣವೂ ಸಹ ದಾಖಲಾಗಿದೆ.ಈ ಬಗ್ಗೆ ಸ್ವತಃ ಎಸ್‌ಪಿ ಮಿಥುನ್‌ ಕುಮಾರ್‌ ಮಾಹಿತಿ ನೀಡಿದ್ದು, ಮಾಧ್ಯಮ ಸಂದೇಶದ ಗ್ರೂಪ್‌ನಲ್ಲಿ ವಿವರ ನೀಡಿದರು

SUMMARY | police firing in bhadravathi paper town police limits

KEY WORDS |‌police firing in bhadravathi ,  paper town police limits