8 ಫೋಟೋ, 40 ಸಾಕ್ಷಿ, 1200 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ | ದರ್ಶನ್‌ ತೂಗುದೀಪರಿಗೆ ಮತ್ತೆ ಕಷ್ಟ!

police have filed an additional chargesheet of over 1,200 pages against actor Darshan Thoogudeepa in the murder case of Renukaswamy  

8 ಫೋಟೋ, 40 ಸಾಕ್ಷಿ,  1200 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ | ದರ್ಶನ್‌ ತೂಗುದೀಪರಿಗೆ ಮತ್ತೆ ಕಷ್ಟ!
police filed an additional chargesheet against actor DarshanThoogudeepa,  murder case of Renukaswamy  

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024 ‌ 

ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆಯ ಪ್ರಕರಣದಲ್ಲಿ ನಟ ದರ್ಶನ್‌ ತೂಗುದೀಪರಿಗೆ ಸಂಕಷ್ಟ ಬಿಡುವ ಹಾಗೆ ಕಾಣುತ್ತಿಲ್ಲ. ಬೆಂಗಳೂರುನಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಇದೀಗ ಪೊಲೀಸರು 1200ಕ್ಕೂ ಅಧಿಕ ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. 

ನಿನ್ನೆ ಶನಿವಾರ  ತನಿಖಾಧಿಕಾರಿ ಎಸಿಪಿ ಚಂದನ್ ಶನಿವಾರ ನಗರದ 57ನೇ ಸಿಸಿಎಚ್ ಕೋರ್ಟ್‌ಗೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ನಡೆದ ದಿನ ಚಿತ್ರದುರ್ಗದ ಗ್ಯಾಂಗ್ ಪಟ್ಟಣಗೆರೆ ಶೆಡ್ ಬಳಿ ಪ್ರಮುಖ ಆರೋಪಿ ದರ್ಶನ್ ಜತೆಗೆ ಮೊಬೈಲ್‌ನಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನೂ ಈ ಹೆಚ್ಚುವರಿ ದೋಷಾರೋಪಪಟ್ಟಿಯಲ್ಲಿ ಲಗತ್ತಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಘಟನೆ ನಡೆದ ವೇಳೆ ದರ್ಶನ್‌ ಶೆಡ್‌ನಲ್ಲಿಯೇ ಇದ್ದರು ಎಂಬುದಕ್ಕೆ ಈ ಫೋಟೋಗಳು ಸಾಕ್ಷಿಯಾಗಲಿವೆ.  

ಈ ಮೊದಲು ACMM ಕೋರ್ಟ್‌ಗೆ 3,991 ಪುಟಗಳ ಮೊದಲ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ಸುಮಾರು 1200ಕ್ಕೂ ಅಧಿಕ ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಈ ಚಾರ್ಜ್‌ಶೀಟ್‌ನಲ್ಲಿ 8 ಫೋಟೋ, 40ಕ್ಕೂ ಅಧಿಕ ಸಾಕ್ಷಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು, ಆರೋಪಿಗಳ ಮೊಬೈಲ್ ಕರೆಗಳ ವಿವರದ ಸಿಡಿಆರ್ ಸೇರಿದಂತೆ ವಿವಿಧ ಮಾಹಿತಿಯನ್ನ ಒಳಗೊಂಡಿದೆ ಎನ್ನಲಾಗುತ್ತಿದೆ. 

ರೇಣುಕಾಸ್ವಾಮಿ ಕೊಲೆ ವೇಳೆ  ಪುನೀತ್ ಎಂಬಾತ ತನ್ನ ಮೊಬೈಲ್‌ನಲ್ಲಿ ದರ್ಶನ್‌ರ ಫೋಟೋಗಳನ್ನು ತೆಗೆದಿದ್ದ. ಆನಂತರ ಫೋಟೋಗಳನ್ನು ಡಿಲೀಟ್‌ ಮಾಡಲಾಗಿತ್ತು. ಬಳಿಕ ಮೊಬೈಲ್‌ ಜಪ್ತಿ ಮಾಡಿದ್ದ ಪೊಲೀಸರು ಅದನ್ನು ರಿಟ್ರೈವ್‌ ಮಾಡಿಸಿದ್ದಾರೆ. ಇದೀಗ ಅದರಲ್ಲಿ ಒಟ್ಟು 8 ಫೋಟೋಗಳು ಲಭ್ಯವಾಗಿದೆ ಎನ್ನಲಾಗಿದೆ. 

 

SUMMARY |  police have filed an additional chargesheet of over 1,200 pages against actor Darshan Thoogudeepa in the murder case of Renukaswamy  




KEY WORDS  | police filed an additional chargesheet against actor DarshanThoogudeepa,  murder case of Renukaswamy