ಮನೆಗೆ ಬಂದಿದ್ದ ಅಪ್ರಾಪ್ತೆಗೆ ಬೇಕರಿ ಮಾಲೀಕನಿಂದ ಲೈಂಗಿಕ ದೌರ್ಜನ್ಯ | ದಾಖಲಾಯ್ತು ಫೋಕ್ಸೋ ಪ್ರಕರಣ
pocso case in shivamogga

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 17, 2025
ಶಿವಮೊಗ್ಗ ಜಿಲ್ಲೆಯ ಠಾಣೆಯೊಂದರಲ್ಲಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯವೆಸಗಿ ಆಕೆಯನ್ನು ಗರ್ಭಿಣಿ ಮಾಡಿದ ಪ್ರಕರಣ ಸಂಬಂಧ PROTECTION OF CHILDREN FROM SEXUAL OFFENCES ACT 2012 (U/s-6); IPC 1860 (U/s-376(2)(n)) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಜಿಲ್ಲೆಯ ನಿವಾಸಿ ಅಪ್ರಾಪ್ತೆಯು ತನ್ನ ಮನೆಯ ಹಿಂದಿರುವ ಬೇಕರಿಗೆ ಹೋಗಿ ಬಂದು ಮಾಡುತ್ತಿದ್ದರು. ಈ ನಡುವೆ ಬೇಕರಿ ಮಾಲೀಕರ ಪತ್ನಿ ಊರಿಗೆ ಹೊರಟಿದ್ದರಿಂದ, ಅಪ್ರಾಪ್ತೆಗೆ ತಮ್ಮ ಮಗಳ ಜೊತೆ ತಮ್ಮ ಮನೆಯಲ್ಲಿ ಇರುವಂತೆ ತಿಳಿಸಿದ್ದರು. ಹೀಗಾಗಿ ಅಪ್ರಾಪ್ತೆ ಅಲ್ಲಿ ಕೆಲದಿನ ಅಲ್ಲಿ ಉಳಿದುಕೊಂಡಿದ್ದಳು. ಈ ವೇಳೆ ಅಪ್ತಾಪ್ತೆಯ ಮೇಲೆ ಬೇಕರಿ ಮಾಲೀಕರ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಅಲ್ಲದೆ ಆ ವಿಷಯವನ್ನು ಮುಚ್ಚಿಡುವಂತೆ ಬೆದರಿಸಿದ್ದಾನೆ. ತದನಂತರ ಅಪ್ರಾಪ್ತೆಯು ಗರ್ಭಿಣಿಯಾಗಿದ್ದು, ಮನೆಯವರಿಗೆ ಅನುಮಾನ ಬಂದು ಆಸ್ಪತ್ರೆಯಲ್ಲಿ ಚೆಕಪ್ ಮಾಡಿಸಿದಾಗ ವಿಷಯ ಗೊತ್ತಾಗಿದೆ. ಈ ಬೆನ್ನಲ್ಲೆ ವಿಚಾರ ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ಬಂದು ಸಂತ್ರಸ್ತ ಅಪ್ರಾಪ್ತೆಯ ದೂರಿನಂತೆ ಕೇಸ್ ದಾಖಲಾಗಿದೆ.
SUMMARY | pocso case in shivamogga
KEY WORDS | pocso case in shivamogga