ದೊಡ್ಡಬ್ಬದ ನಡುವೆ ಕಾಡು ಹಂದಿಯ ಶಿಕಾರಿ | ಶಾಕ್ ಕೊಟ್ಟ ಅರಣ್ಯ ಇಲಾಖೆಯ ಆಪರೇಷನ್ |
In the midst of Deepavali festival, the issue of wild boar hunting in Shivamogga district is making a lot of noise. The forest department has arrested one person in connection with the poaching of wild boar in Hosanagara taluk here.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 2, 2024
ದೀಪಾವಳಿ ಹಬ್ಬದ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಕಾಡು ಹಂದಿಯ ಬೇಟೆಯ ವಿಚಾರ ಜೋರು ಸದ್ದಾಗುತ್ತಿದೆ. ಇಲ್ಲಿನ ಹೊಸನಗರ ತಾಲ್ಲೂಕು ನಲ್ಲಿ ಕಾಡು ಹಂದಿಯನ್ನ ಬೇಟೆಯಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಓರ್ವನನ್ನ ಅರಣ್ಯ ಇಲಾಖೆ ಬಂಧಿಸಿದೆ.
ಕಾಡು ಹಂದಿಯನ್ನು ಅಕ್ರಮವಾಗಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಕೆ.ಜಿ ಮಾಂಸವನ್ನ ಸಹ ವಶಕ್ಕೆ ಪಡೆಯಲಾಗಿದೆ. ಈ ಘಟನೆ ಹೊಸನಗರ ತಾಲ್ಲೂಕು ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಹುಣಸವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಘಟನೆಯಲ್ಲಿ ಓರ್ವ ಅರೆಸ್ಟ್ ಆಗಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಎಸಿಎಫ್ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್, ಬೀಟ್ ಫಾರೆಸ್ಟರ್ ಎನ್.ರಾಜು, ಪುಟ್ಟಸ್ವಾಮಿ, ಭರತ್, ಪ್ರದೀಪ್, ಚಾಲಕರಾದ ಪ್ರಮೋದ್, ಎಸ್.ಜಗದೀಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.
SUMMARY | In the midst of Deepavali festival, the issue of wild boar hunting in Shivamogga district is making a lot of noise. The forest department has arrested one person in connection with the poaching of wild boar in Hosanagara taluk here.
KEYWORDS | Deepavali festival, wild boar hunting in Shivamogga, forest department has arrested one person, poaching of wild boar in Hosanagara taluk