ಪಾರ್ಟ್​ ಟೈಮ್​ ಜಾಬ್​ ಆಮಿಷ : 5 ದಿನದಲ್ಲಿ ಶಿವಮೊಗ್ಗದ ಮಹಿಳೆ ಕಳೆದುಕೊಂಡಿದ್ದೆಷ್ಟು ಲಕ್ಷ ಗೊತ್ತಾ..?

prathapa thirthahalli
Prathapa thirthahalli - content producer

Part Time Job Scam :  ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ಇನ್ನಿತರ ಮಾಧ್ಯಮಗಳಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಪಾರ್ಟ್‌ ಟೈಮ್‌ ಕೆಲಸದ ಕುರಿತು ಅನೇಕ ಜಾಹೀರಾತುಗಳು ಪ್ರಕಟವಾಗುತ್ತಿವೆ. ಕೆಲವರು ಅಂತಹ ಆಮಿಷಗಳನ್ನು ನಂಬಿ ತಮ್ಮಲ್ಲಿರುವ ಹಣವನ್ನು ಹೂಡಿಕೆ ಮಾಡಿದರೆ, ಇನ್ನು ಕೆಲವರು ಅವುಗಳನ್ನು ಅಷ್ಟು ಬೇಗ ನಂಬುವುದಿಲ್ಲ. ಆದರೆ, ಶಿವಮೊಗ್ಗದ ಮಹಿಳೆಯೊಬ್ಬರು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಪಾರ್ಟ್‌ ಟೈಮ್‌ ಜಾಬ್‌ನ ಆಸೆಗೆ ಬಿದ್ದು ಸುಮಾರು 6,78,100 ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

ಹೌದು ನಗರದ ಉದ್ಯಮಿ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಬಂದಿದ್ದ ಪಾರ್ಟ್‌ ಟೈಮ್‌ ಕೆಲಸದ ಆಮಿಷಕ್ಕೆ ಬಲಿಯಾಗಿ ಕೇವಲ 5 ದಿನಗಳ ಅಂತರದಲ್ಲಿ ಬರೋಬ್ಬರಿ ₹6,78,100 ರೂಪಾಯಿ ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ದೂರಿನ ಪ್ರಕಾರ, ಅಪರಿಚಿತ ವಂಚಕರು ಎನ್‌ಎಸ್‌ಇ (NSE) ಕಂಪನಿಯ ಉದ್ಯೋಗಿಗಳಂತೆ ನಟಿಸಿದ್ದಾರೆ. ನಂತರ ಮಹಿಳೆಗೆ ಎನ್‌ಎಸ್‌ಇ ಕಂಪನಿಯಲ್ಲಿ ಪಾರ್ಟ್‌ ಟೈಮ್‌ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದು, ಅಷ್ಟೇ ಅಲ್ಲದೆ, ಎನ್‌ಎಸ್‌ಇ ಕಂಪನಿಯಿಂದ ನೀಡಲಾಗುವ ಕೆಲವು ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಭಾರೀ ಪ್ರಮಾಣದ ಲಾಭಾಂಶ ನೀಡುವುದಾಗಿ ನಂಬಿಸಿದ್ದಾರೆ.

- Advertisement -

ವಂಚಕರ ಮಾತನ್ನು ನಂಬಿದ ಮಹಿಳೆಯು ಸೆಪ್ಟೆಂಬರ್ 24, 2025 ರಿಂದ ಸೆಪ್ಟೆಂಬರ್ 29, 2025ರ ಅವಧಿಯೊಳಗೆ ಒಟ್ಟು 6,78,100 ಹಣವನ್ನು ವಂಚಕರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹಣ ವರ್ಗಾಯಿಸಿದ ನಂತರ, ವಂಚಕರು ಅವರಿಗೆ ಯಾವುದೇ ಲಾಭಾಂಶವನ್ನು ಹಿಂತಿರುಗಿಸಿಲ್ಲ. ಅಲ್ಲದೆ, ಮೊತ್ತವನ್ನು ಸಹ ಮರಳಿ ನೀಡದೇ ಮೋಸ ಮಾಡಿದ್ದಾರೆ. ತಮಗೆ ವಂಚನೆಯಾಗಿರುವುದನ್ನು ಅರಿತ ಮಹಿಳೆಯು ಶಿವಮೊಗ್ಗ ಸಿಇಎನ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. 

Part Time Job Scam

Share This Article
Leave a Comment

Leave a Reply

Your email address will not be published. Required fields are marked *