OTT ಯಲ್ಲಿ ಮ್ಯಾಕ್ಸಿಮಮ್‌ ಮನರಂಜನೆ ನೀಡಲು ಮ್ಯಾಕ್ಸ್‌ ರೆಡಿ | ರಿಲೀಸ್‌ ಯಾವಾಗ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 5, 2025

ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಚಿತ್ರ ಇದೇ ಫೆ 22 ರಂದು ಜೀ 5 ನಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಡಿಸೆಂಬರ್‌ 25 ರಂದು ದೇಶಾದ್ಯಂತ ಮ್ಯಾಕ್ಸ್‌ ಚಿತ್ರ ರಿಲೀಸ್‌ ಆಗಿ ಸಖತ್‌ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ  ಈ ಚಿತ್ರ 50 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ 2024 ರ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಚಿತ್ರ ಎಂದೆಸಿಕೊಂಡಿತ್ತು. ಆ ಮಟ್ಟಿಗೆ ಸಿನಿ ಪ್ರೇಕ್ಷಕರನ್ನ ಮ್ಯಾಕ್ಸ್‌ ಚಿತ್ರ ಸೆಳೆದಿತ್ತು. ಒಂದು ರಾತ್ರಿ ನಡೆಯುವ ಈ ಚಿತ್ರದ ಕಥೆಯಲ್ಲಿ ಕಿಚ್ಚಾ ಸುದೀಪ್‌ ಪೊಲೀಸ್‌ ಪಾತ್ರದಲ್ಲಿಅಭಿನಯಿಸಿದ್ದರು. 

ಉತ್ತಮ ರೀತಿಯಲ್ಲಿ ಯಶಸ್ಸು ಕಂಡಿದ್ದ ಈ ಚಿತ್ರ ಒಟಿಟಿಯಲ್ಲಿ ಯಾವಾಗ ರಿಲೀಸ್‌ ಆಗುತ್ತದೆ ಎಂದು ಸುದೀಪ್‌ ಅಭಿಮಾನಿಗಳು ಕಾದುಕುಳಿತಿದ್ದರು. ಇದೀಗ ಸುದೀಪ್‌ ಅಭಿಮಾನಿಗಳಿಗೆ  ಸಿಹಿ ಸುದ್ದಿ ಸಿಕ್ಕಿದ್ದು, ಈ ಚಿತ್ರ ಜೀ 5 ನಲ್ಲಿ ಫೆ 22 ರಂದು ಕನ್ನಡ, ತೆಲುಗು, ತಮಿಳು, ಮಳಯಾಳಂ ಹಾಗೂ  ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. 

SUMMARY | Kichcha Sudeep starrer Max is all set to release on February 22 on ZEE5 in five languages.

KEYWORDS | Kichcha Sudeep,  Max,  ZEE 5,

Share This Article