nagara Panchami | ನಾಗರ ಪಂಚಮಿ ದಿನ , ಹಾವು ಕಚ್ಚಿ ಬಾಣಂತಿ ಸಾವು | ಸಾಗರ ತಾಲ್ಲೂಕುನಲ್ಲಿ ಘಟನೆ

nagara Panchami | On nagara Panchami, a pregnant woman dies after being bitten by a snake | The incident took place in Sagar taluk

nagara Panchami | ನಾಗರ ಪಂಚಮಿ ದಿನ , ಹಾವು ಕಚ್ಚಿ ಬಾಣಂತಿ ಸಾವು | ಸಾಗರ ತಾಲ್ಲೂಕುನಲ್ಲಿ ಘಟನೆ
nagara Panchami ,woman dies after being bitten by a snake, Sagar taluk, ಸಾಗರ ತಾಲ್ಲೂಕು, ನಾಗರ ಪಂಚಮಿ, ಹಾವು ಕಚ್ಚಿ ಸಾವು

SHIVAMOGGA | MALENADUTODAY NEWS | Aug 9, 2024  ಮಲೆನಾಡು ಟುಡೆ  

ನಾಗರ ಪಂಚಮಿ ದಿನ ಹಾವು ಕಚ್ಚಿ ಬಾಣಂತಿಯೊಬ್ಬರು ಸಾವನ್ನಪ್ಪಿದ ಬಗ್ಗೆ ಸಾಗರ ತಾಲ್ಲೂಕುನಲ್ಲಿ (Sagar taluk) ವರದಿಯಾಗಿದೆ 

ನಾಗರ ಪಂಚಮಿ (NagaraPanchami)

ಸಾಗರ ತಾಲ್ಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿನ  ನಿವಾಸಿ ರಂಜಿತಾ ಎಂಬ 22 ವರ್ಷದ ಮಹಿಳೆ ಮೃತ ನಿವಾಸಿ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಜಾನುವಾರುಗೆ ಮೇವು ತರಲು ಎಂದು ಹೊಲಕ್ಕೆ ಹೋಗಿದ್ದ ಇವರಿಗೆ ಅಲ್ಲಿಯೇ ಪೊದೆಯಲ್ಲಿದ್ದ  ಹಾವೊಂದು ಕಚ್ಚಿದೆ. ಮೊದಲು ಮಹಿಳೆಗೆ ಹಾವು ಕಚ್ಚಿರುವ ಬಗ್ಗೆ ಗೊತ್ತಾಗಲಿಲ್ಲ. ಆ ಬಳಿಕ ನಂಜು ಏರಿ ಹೊಲದಲ್ಲಿಯೇ ರಂಜಿತಾ ಕುಸಿದು ಬಿದ್ದಿದ್ದಾಳೆ. 

ಕೆಲಹೊತ್ತು ಬಿಟ್ಟು ಮನೆಯವರು ಗದ್ದೆಗೆ ಬಂದು ನೋಡಿದಾಗ ರಂಜಿತಾ ಕುಸಿದು ಬಿದ್ದಿರುವುದು ಗೊತ್ತಾಗಿದೆ. ತಕ್ಷಣವೇ ಅವರನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಸಾಗರ ಉಪವಿಭಾಗೀಯ ಆಸ್ಪತ್ರೆ (Sagar Sub-Divisional Hospital )

ಅಲ್ಲಿನ ವೈದ್ಯರು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ಆಕೆಯನ್ನು ಕರೆತರುವ ಸಂದರ್ಭದಲ್ಲಿ ಮಾರ್ಗಮಧ್ಯೆ ರಂಜಿತಾ ಸಾವನ್ನಪ್ಪಿದ್ದಾರೆ. 



ಮೂರು ವರುಷದ ಮಗುವನ್ನ ಹೊಂದಿರುವ ರಂಜಿತಾರಿಗೆ ಎರಡನೇ ಹೆರಿಗೆಯಾಗಿ ನಾಲ್ಕು ತಿಂಗಳಷ್ಟೆ ಕಳೆದಿತ್ತು. ಇದೀಗ ಇಬ್ಬರು ಮಕ್ಕಳು ತಾಯಿಯನ್ನ ಕಳೆದುಕೊಂಡಿದ್ದಾರೆ.