ಶಿರಾಳಕೊಪ್ಪ ಮೂಲದ ಅಧಿಕಾರಿ ಬೆಂಗಳೂರಿನಲ್ಲಿ ಆತ್ಮಹತ್ಯೆ

  officer from Shiralakoppa, Shikaripura taluk, Shivamogga district,  Karnataka Soap and Detergent Limited ,Bengaluru, committed suicide

ಶಿರಾಳಕೊಪ್ಪ ಮೂಲದ ಅಧಿಕಾರಿ ಬೆಂಗಳೂರಿನಲ್ಲಿ ಆತ್ಮಹತ್ಯೆ
  officer from Shiralakoppa, Shikaripura taluk, Shivamogga district,  Karnataka Soap and Detergent Limited ,Bengaluru, committed suicide

SHIVAMOGGA | MALENADUTODAY NEWS | ಮಲೆನಾಡು ಟುಡೆ  Dec 31, 2024 ‌‌ 

ಬೆಂಗಳೂರಿನಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲುಕು ಶಿರಾಳಕೊಪ್ಪ ಮೂಲದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ  ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ KSDL ಅಧಿಕಾರಿ ಅಮೃತ್‌ ಶಿರೂರ್‌ ಆತ್ಮಹತ್ಯೆ ಮಾಡಿಕೊಂಡವರು. 

ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ತಿ ಬರುವ ಮಹಾಲಕ್ಷ್ಮೀ ಲೇಔಟ್ ಮುನೇಶ್ವರ ಬ್ಲಾಕ್ ನಿವಾಸಿಯಾಗಿದ್ದ ಅಮೃತ್‌ ಶಿರೂರು ಡಿಸೆಂಬರ್‌ 28 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ವಿಷಯ ಬೆಳಕಿಗೆ ಬಂದಿದೆ. ಮನೆಯ ಮಾಲೀಕ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ 

ಮೃತ ಅಮೃತ್ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದವರು. ಕಳೆದ 10 ವರ್ಷಗಳಿಂದ ಕೆಎಸ್‌ಡಿಎಲ್‌ನ ಖರೀದಿ ವಿಭಾಗದಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಮಹಾಲಕ್ಷ್ಮೀ ಲೇಔಟ್‌ನ ಮುನೇಶ್ವರ ಬ್ಲಾಕ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. 

ಕೌಟುಂಬಿಕ ಸಮಸ್ಯೆಗಳಿಂದ ನೊಂದಿದ್ದ ಇವರು ಪೋಷಕರಿಗೆ ಒಳ್ಳೆಯ ಮಗನಾಗಲಿಲ್ಲ. ಪತ್ನಿಗೆ ಒಳ್ಳೆಯ ಗಂಡನಾಗಲಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ  ಡೆತ್‌ ನೋಟ್‌ನಲ್ಲಿ ಬರೆದು ಪ್ಯಾನಿಗೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

SUMMARY |  An officer from Shiralakoppa, Shikaripura taluka, Shivamogga district, who was working for Karnataka Soap and Detergent Limited in Bengaluru, committed suicide.

KEY WORDS |   officer from Shiralakoppa, Shikaripura taluk, Shivamogga district,  Karnataka Soap and Detergent Limited ,Bengaluru, committed suicide